ಹಿರಿಯೂರು :
ಆರ್ಯವೈಶ್ಯ ಮಂಡಳಿ ಮತ್ತು ಆರ್ಯವೈಶ್ಯಮಹಿಳಾ ಮಂಡಳಿ ರಾಮನವಮಿ ಪ್ರಯುಕ್ತ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ 59ನೇ ವರ್ಷದ ಶ್ರೀರಾಮನವಮಿ ಉತ್ಸವವನ್ನು ಸುಮಾರು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ಪತ್ರಿದಿನವು ಶ್ರೀರಾಮಸೀತೆಯರ ಭಜನೆ, ಪೂಜಾಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ನವಮಿಯದಿನ ಬೆಳಿಗ್ಗೆ ಗಂಗೆಪೂಜೆ, ಗಣಪತಿಪೂಜೆ, ಶ್ರೀರಾಮಸೀತೆಯರ ಕಲ್ಯಾಣವನ್ನು ನಡೆಸಲಾಯಿತು. 10ನೇ ದಿನ ವೈಶ್ಯಕುಲಬಾಂಧವರು ವ್ಯವಹಾರಗಳಿಗೆ ರಜೆ ಘೋಷಿಸಿ ಶ್ರೀರಾಮ ಸೀತೆ ಲಕ್ಷ್ಮಣ ಆಂಜನೇಯರ ವಿಗ್ರಹಮೂರ್ತಿಗಳಿಗೆ ವಿಶೇಷ ಪುಷ್ಪಾಲಂಕಾರಗೊಳಿಸಿ ತೆರೆದವಾಹನದಲ್ಲಿ ನಗರ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಕ್ತರಿಂದ ಪೂಜೆ, ಪಾನಕ, ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು. ಮೆರವಣಿಗೆಯ ನಂತರ ಪೂಜಾ ಕಾರ್ಯಕರ್ತರುಗಳಾದ ಶ್ರೀಮತಿ ಉಮಾಪತಿ ಆರ್.ಅನಂತ್ ಕುಮಾರ್, ಮತ್ತು ಶ್ರೀಮತಿ ರಾಧಿಕಾ ಅರವಿಂದ್ ಕುಮಾರ್ ದಂಪತಿಗಳಿಂದ ಶ್ರೀರಾಮಮೂರ್ತಿಗೆ ವಿಶೇಷ ಸ್ವರ್ಣಾಭರಣ ಮತ್ತು ಪುಷ್ಪಾಲಂಕಾರ ಪೂಜೆ ನಡೆಸಿ ಹೋಮ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯಮಂಡಳಿ ಅಧ್ಯಕ್ಷ ಹೆಚ್.ಎಸ್.ನಾಗರಾಜ್‍ಗುಪ್ತಾ ಕಾರ್ಯದರ್ಶಿ ಪಿ.ವಿ.ನಾಗರಾಜ್, ಖಜಾಂಚಿ ಮಂಜುನಾಥ್, ಪೂಜಾಅಧ್ಯಕ್ಷ ವಿ.ಸತ್ಯನಾರಾಯಣಶೆಟ್ಟಿ, ಆರ್ಯವೈಶ್ಯಮಂಡಳಿ ಪದಾಧಿಕಾರಿಗಳು ಆರ್ಯವೈಶ್ಯ ಕುಲಬಾಂಧವರು, ಶ್ರೀರಾಮ ನವಮಿ ಉತ್ಸವದಲ್ಲಿ ಭಾಗಿಗಳಾಗಿ ಭಕ್ತಿ ಸಮರ್ಪಿಸಿದರು.