ರಟ್ಟೀಹಳ್ಳಿ:
ಶಾಲೆ ಕಲಿಯಲು ಹಿಂದನದಿನಮಾನಗಳಲ್ಲಿದ್ದ ಕಷ್ಟಗಳು ಇಂದಿನ ವಿದ್ಯಾರ್ಥಿಗಳಿಗೆ ಇಲ್ಲ,ಸರಕಾರವು ಶಾಲೆ ಕಲಿಯುವವರಿಗೆ ಸಮವಸ್ತ್ರ,ಸೈಕಲ್,ಶೂ ಸಾಕ್ಸ್,ಪಠ್ಯಪುಸ್ತಕ ಮುಂತಾದ ಸೌಲಭ್ಯಗಳನ್ನು ನೀಡುತ್ತಿದೆ ಇವೆಲ್ಲವುಗಳನ್ನು ಸದುಪಯೋಗಪಡಿಸಿಕೊಳ್ಳಬೆಕೆಂದು ಜಿ.ಪಂ.ಸದಸ್ಯ ಎನ್.ಎಂ.ಈಟೇರ ತಿಳಿಸಿದರು.
ಅವರು ತಾಲೂಕಿನ ಸಮೀಪದ ಕುಂಚೂರಿನ ಟಿ.ಎಲ್.ಆರ್ ಚಕ್ರಸಾಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ ದಸರಾ ರಜಾಅವಧಿಯ ವಿಶ್ವಾಸ ಕಿರಣ ಕಲಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ನೀವುಗಳು ಸಂಪನ್ಮೂಲ ಶಿಕ್ಷಕರು ಹೇಳಿಕೊಡುವ ಪಾಠಗಳನ್ನು ಸರಿಯಾಗಿ ಮನನಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕೆಂದರು.ಇದೇ ಸಂದರ್ಭದಲ್ಲಿ ತಾ.ಪಂ.ಸದಸ್ಯ ದಿಳ್ಳೆಪ್ಪ.ಹರಳಹಳ್ಳಿ ಮಾತಣಡಿತ್ತಾ ಮುಂದಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 620ಕ್ಕಿಂತಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ರೂ 5000 ಬಹುಮಾನ ಘೋಷಣೆ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕ ಸರೇಶ ಅಂದಾನಪ್ಪನವರ ಕಾರ್ಯಕ್ರಮದ ರೂಪರೇಷಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಕಾರ್ಯಕ್ರಮಕ್ಕೆ ಶಿರಗಂಬಿ,ಕಡೂರ,ನೆಸ್ವಿ,ಯಡಗೋಡ,ಹುಲ್ಲತ್ತಿ ಸರಕಾರಿ ಪ್ರೌಢ ಶಾಲೆಗಳ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ತಮ್ಮ ಸ್ವಂತ ಕರ್ಚಿನಲ್ಲಿ ಅಟೊಮೂಲಕ ಆಗಮಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಎಸ್.ಡಿ , ಎಂ.ಸಿ ಉಪಾಧ್ಯಕ್ಷ ಕರಬಸಪ್ಪ.ಚಕ್ರಸಾಲಿ ಸಂಪನ್ಮೂಲ ಶಿಕ್ಷಕರಾದ ಬಸವರಾಜ .ಉಪ್ಪಾರ , ಮಧು.ಹಲವಾಗಲು , ಎಸ್.ಆರ್.ಹಲಗೇರಿ . ಮಠ ಶಿಕ್ಷಕರಾದ ಎಂ.ಎಂ.ಕೆರೂರ,ಡಾಕೇಶ್.ತಾಳಗುಂದ ಮುಂತಾದವರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








