ಸಿನಿವಾರವಾದ ಶುಕ್ರವಾರದಂದು ಮೂರು ಸಿನಿಮಾಗಳು ಬಿಡುಗಡೆಗೊಂಡಿದ್ದು, ಸಿನಿ ಅಭಿಮಾನಿಗಳಿಗೆ ಮನರಂಜಿಸುತ್ತಿವೆ
`ಆಯೋಗ್ಯ’
ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸಿರುವ `ಅಯೋಗ್ಯ` ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಸ್.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಡಿಫರೇಂಟ್ ಡ್ಯಾನಿ, ವಿಕ್ರಂ ಮೋರ್, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ, ಮುರಳಿ, ಮೋಹನ್ ನೃತ್ಯ ನಿರ್ದೇಶನ ಹಾಗೂ ರಘು ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಹಾಗೂ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ನೀನಾಸಂ ಸತೀಶ್, ರಚಿತಾರಾಮ್, ತಬಲನಾಣಿ, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಸಾಧುಕೋಕಿಲ, ಸುಂದರರಾಜ್, ಅರುಣಬಾಲರಾಜ್, ಕುರಿಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
`ಒಂಥರ ಬಣ್ಣಗಳು’
ಯೋಗೇಶ್ ಬಿ ದೊಡ್ಡಿ ಅವರು ನಿರ್ಮಿಸಿರುವ `ಒಂಥರ ಬಣ್ಣಗಳು` ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.
ಚಿತ್ರಕ್ಕೆ ಸುನೀಲ್ ಭೀಮರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಭರತ್ ಬಿ ಜೆ ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಸಂಕಲನ ಹಾಗೂ ಮದನ್ ಹರಿಣಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿರಣ್ ಶ್ರೀನಿವಾಸ್, ಹಿತಾ ಚಂದ್ರಶೇಖರ್, ಸೋನು ಗೌಡ, ಪ್ರತಾಪ್ ನಾರಾಯಣ್, ಪ್ರವೀಣ್ ಜೈನ್, ಲೋಹಿತಾಶ್ವ, ಶರತ್ ಲೋಹಿತಾಶ್ವ, ದತ್ತಣ್ಣ, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಸುಚೀಂದ್ರಪ್ರಸಾದ್, ಆಶಾಲತ, ಸುಂದರ್, ವೀಣಾಸುಂದರ್, ಮಾಲತಿ ಸರ್ ದೇಶಪಾಂಡೆ, ಅರುಣ ಬಾಲರಾಜ್, ಗೋವಿಂದೇ ಗೌಡ, ಕೆಂಪೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
“ದಿವಂಗತ ಮಂಜುನಾಥನ ಗೆಳೆಯರು”
807 ಪ್ರೊಡಕ್ಷನ್ ಲಾಛಂನದಲ್ಲಿ ಎನ್.ಡಿ ಅರುಣ್ ಕುಮಾರ್ ನಿರ್ಮಿಸಿರುವ ದಿವಂಗತ ಮಂಜುನಾಥನ ಗೆಳೆಯರು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಐದು ಜನ ಇಂಜಿನಿಯರಿಂಗ್ ಕಾಲೇಜ್ ಸ್ನೇಹಿತರು ಬಹಳ ವರ್ಷಗಳ ನಂತರ ಭೇಟಿಯಾಗುತ್ತಾರೆ. ಆದರೆ ಅವರೆಲ್ಲ ಸೇರುವುದು ಒಂದು ಪೊಲೀಸ್ ಸ್ಟೇಷನ್‍ನಲ್ಲಿ ಆ ಸಂದ ರ್ಭ ಸೃಷ್ಟಿಯಾಗುವುದು ಏಕೆ ಮತ್ತು ಹೇಗೆ ಎಂಬ ಕಥಾಹಂದರವಾಗಿರುವ ಈ ಚಿತ್ರವನ್ನು ಅರುಣ್ ಎನ್.ಡಿ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರಕ್ಕೆ ಪೂರ್ಣ, ಮೊಹಮ್ಮದ್ ಅಮಿನ್ ಛಾಯಾಗ್ರಹಣ, ವಿನಯ್‍ಕುಮಾರ್ ಸಂಗೀತ, ರವಿಪೂಜಾರ್ ಕಲಾನಿರ್ದೇಶನ ಹಾಗು ಸಹ ನಿರ್ದೇಶನ ಸಿ.ಕೆ.ಕುಮಾರ್ ಸಂಕಲನ, ಗೋಪಿ ಶೀಗೆಹಳ್ಳಿ, ಅರುಣ್ ಕುಮಾರ್ ಎನ್,ಡಿ, ಸಾಹಿತ್ಯವಿದೆ. ರುದ್ರಪ್ರಯಾಗ್, ಶೀತಲ್ ಪಾಂಡ್ಯ, ಶಂಕರ್ ಮೂರ್ತಿ, ರವಿಪೂಜಾರ್, ಮೋಹನ್ ದಾಸ್, ಸುಂಗಾರಿ ನಾಗರಾಜ್, ಸತ್ಯಜಿತ್, ನವೀನ್, ಜ್ಯೋತಿ ಮೂರೂರು, ಪ್ರಭಾರಕರ್ ರಾವ್ ಇನ್ನು ಮುಂತಾದವರ ತಾರಬಳಗವಿದೆ
