ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ಅಮನಿ….!

ಚೆನ್ನೈ:

       ತೆಲುಗು ನಟಿ ಆಮನಿ ಕೂಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಇದೆ. ಕೆಲವರು ತಮ್ಮೊಟ್ಟಿಗೆ ಕೂಡ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇದರ ಸುಳಿವು ಸಿಗುತ್ತಿದ್ದಂತೆ ನಾನು ಎಚ್ಚೆತ್ತುಕೊಂಡು ಅದರಿಂದ ದೂರವೇ ಉಳಿದುಬಿಟ್ಟೆ. ಇಂತಹವರು ಎಲ್ಲಾ ಕಡೆ ಇರುತ್ತಾರೆ. ದೊಡ್ಡ ದೊಡ್ಡ ಸಿನಿಮಾಗಳ ಸಂಸ್ಥೆಗಳಲ್ಲಿ ಈ ರೀತಿ ಆಗುವುದಿಲ್ಲ. ಹೊಸದಾಗಿ ಸಿನಿಮಾ ನಿರ್ಮಾಣಕ್ಕೆ ಬರುವ ಸಂಸ್ಥೆಗಳಲ್ಲಿ ಅಥವಾ ಕೆಟ್ಟ ಉದ್ದೇಶದಿಂದಲೇ ಸಿನಿಮಾ ಮಾಡುವ ನೆಪದಲ್ಲಿ ಬರುವವರಿಂದ ಇಂತಹ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ.

    ಮತ್ತೊಮ್ಮೆ ನಟಿ ಆಮನಿ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. “ಸಾವಿತ್ರಿ ಕಾಲದಿಂದಲೂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳಿಗೆ ಇಂತಹ ಸಮಸ್ಯೆಗಳು ಇವೆ. ಆದರೆ ನಾವು ಯಾವುದೇ ಸರಿ? ಯಾವುದು ತಪ್ಪು? ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲರೂ ಕಷ್ಟಪಟ್ಟು ಇಲ್ಲಿದೆ ಬರುತ್ತಾರೆ. ಯಾರಿಗೂ ಅಷ್ಟು ಸುಲಭವಾಗಿ ಅವಕಾಶ, ಯಶಸ್ಸು ಸಿಗಲ್ಲ”

   “ಎಲ್ಲಾ ಕ್ಷೇತ್ರಗಳಲ್ಲಿ ಒಳ್ಳೆಯದು, ಕೆಟ್ಟದು ಇರುತ್ತದೆ. ಅದನ್ನು ನಾವು ನೋಡಿ ಆಯ್ಕೆ ಮಾಡಿಕೊಳ್ಳಬೇಕು. ನನಗೂ ತಮಿಳು ಚಿತ್ರರಂಗದಲ್ಲಿ ಇಂತಹ ಕೆಟ್ಟ ಅನುಭವ ಆಗಿದೆ. ದೊಡ್ಡ ಸಿನಿಮಾ ಸಂಸ್ಥೆಗಳಲ್ಲಿ ಅಲ್ಲ. ಕೆಲ ಹೊಸಬರುತ್ತಾರೆ ಸಿನಿಮಾ ಮಾಡ್ತೀವಿ ಅಂತ. ನಮಗೆ ಅವರು ಹೊಸಬರು, ಒಳ್ಳೆಯವರು ಕೆಟ್ಟವರು ಎನ್ನುವುದು ಹೇಗೆ ಗೊತ್ತಾಗುತ್ತದೆ. ಅವಕಾಶಗಳಿಗಾಗಿ ಪ್ರಯತ್ನಿಸುತ್ತಿರುವಾಗ ಅವಕಾಶ ಕೇಳಿ ಹೋಗುತ್ತೇವೆ”

    “ಸಿನಿಮಾ ಅವಕಾಶ ಸಿಗುತ್ತದೆ ಎಂದು ಮ್ಯಾನೇಜರ್ ಕರೆದರು ಎನ್ನುವ ಕಾರಣಕ್ಕೆ ಹೋಗುತ್ತೇವೆ. ಟೂ ಪೀಸ್ ಹಾಕಬೇಕು. ತೊಡೆ ಮೇಲೆ ಸ್ಟ್ರಚ್ ಮಾರ್ಕ್ ರೀತಿ ಇರುತ್ತಲ್ಲ. ನಿಮಗೂ ಇದ್ಯಾ? ಎಂದು ಕೇಳುತ್ತಾರೆ. ನನಗ್ಯಾಕೆ ಇರುತ್ತದೆ? ನನಗೆ ಇಲ್ಲ ಅಂದ್ರೆ, ಒಮ್ಮೆ ತೋರಿಸಿದರೆ ಚೆನ್ನಾಗಿರುತ್ತದೆ. ಅಮ್ಮ, ಸಹೋದರನ ಜೊತೆ ಅವಕಾಶ ಕೇಳಲು ಹೋಗಿರುತ್ತೇವೆ. ಅವರ ಮುಂದೆ ಹೇಗೆ ಬಟ್ಟೆ ತೆಗೆದು ತೋರಿಸಿ ಅಂದ್ರೆ ಹೇಗೆ? ಅದನ್ನು ಬೇಕು ಅಂತ ಮಾಡ್ತಾರಾ? ಇದೇ ಕೆಟ್ಟ ಉದ್ದೇಶದಿಂದ ಆಫೀಸ್ ತೆರೆದು ಕುಳಿತಿರುತ್ತಾರಾ? ಗೊತ್ತಿಲ್ಲ.”

  “ಆ ಸಂದರ್ಭದಲ್ಲೇ ಅವರ ಉದ್ದೇಶ ಏನು? ಎನ್ನುವುದು ಗೊತ್ತಾಗಿಬಿಡುತ್ತದೆ. ಬೇರೆ ಕಂಪನಿಗಳಲ್ಲಿ ಈ ರೀತಿ ಕೇಳಲಿಲ್ಲ. ಇವರು ಯಾಕೆ ಹೀಗೆ ಕೇಳ್ತಾರೆ ಎಂದು ಗೊತ್ತಾಗುತ್ತದೆ. ದೊಡ್ಡ ಸಂಸ್ಥೆಗಳಲ್ಲಿ ಅವಕಾಶ ಕೇಳಿ ಹೋದಾಗ ಆ ರೀತಿ ನಟನೆ ಮಾಡಿ ತೋರಿಸು, ಭಾವನಾತ್ಮಕ ಸನ್ನಿವೇಶದಲ್ಲಿ ನಟಿಸಿ ತೋರಿಸು, ಡೈಲಾಗ್ಸ್ ಹೇಳಿ ತೋರಿಸು ಎನ್ನುತ್ತಾರೆ. ಅದು ಬಿಟ್ಟು ಸ್ಟ್ರೆಚ್ ಮಾರ್ಕ್ ತೋರ್ಸು, ಕಪ್ಪು ಮಚ್ಚೆ ಇದ್ಯಾ ತೋರ್ಸು ಎಂದು ಯಾರು ಕೇಳಲ್ಲ. ಮೊನ್ನೆ ಒಬ್ಬ ನಟಿಯನ್ನು ಹೀಗೆ ಗೊತ್ತಿಲ್ಲದೇ ಆಯ್ಕೆ ಮಾಡಿ ಸಮಸ್ಯೆ ಆಯಿತು. ನೀವು ಬಟ್ಟೆ ಬಿಚ್ಚಿ ತೋರ್ಸಿ ಎಂದು ಕೆಲವರು ಕೇಳಿದ್ದರು” ಎಂದು ಆಮನಿ ಬೇಸರ ವ್ಯಕ್ತಪಡಿಸಿದ್ದಾರೆ.

   “ನನ್ನನ್ನು ಹೀಗೆ ಕೇಳಿದಾಗ ನನಗೆ ಸ್ವಿಮ್ಮಿಂಗ್ ಬರಲ್ಲ ಸರ್, ನನಗೆ ಅಂತಹ ಪಾತ್ರ ಬೇಡ ಸರ್ ಎಂದು ಎದ್ದು ಬರುವುದು ನಮ್ಮ ಪದ್ದತಿ. ಸರಿ ತೋರಿಸುತ್ತೇನೆ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಕಥೆಗೆ ಸೂಕ್ತವಾಗಿದ್ದರೆ ಶೂಟಿಂಗ್ ವೇಳೆ ಟೂ ಪೀಸ್ ಹಾಕುತ್ತೇನೆ. ಆದರೆ ಇಲ್ಲಿ ಆ ಮಾರ್ಕ್ ಈ ಮಾರ್ಕ್ ತೋರಿಸೋಕೆ ಆಗಲ್ಲ ಎಂದು ನಾನು ಎದ್ದು ಬಂದಿರುವ ಸನ್ನಿವೇಶಗಳಿವೆ. ಈ ರೀತಿ ಹೇಳಿದಾಗ ಅವಕಾಶ ಬೇಡ ಎಂದು ಬಿಟ್ಟು ಬಂದಿದ್ದಿದೆ” ಎಂದು ಆಮನಿ ತಿಳಿಸಿದ್ದಾರೆ.

   “ಸಿನಿಮಾವನ್ನು ಪ್ರೀತಿಸಿ, ಪ್ಯಾಷನ್ ಇಂದ ಬರುವವರು ಇಂತಹ ತಪ್ಪು ಮಾಡಲ್ಲ. ಕೆಲವರು ಇದಕ್ಕೆ ಒಪ್ಪಿಕೊಳ್ಳುವುದು ಇದೆ. ಅಂತಹ ಸಮಯದಲ್ಲಿ ಇಂತಹ ತಪ್ಪು ನಡೆಯುತ್ತದೆ. ಯಾರು ತಪ್ಪು ದಾರಿಗೆ ಹೋಗಬೇಕು ಎಂದು ಬರಲ್ಲ. ಹೆಣ್ಣು ಮಕ್ಕಳು ದೊಡ್ಡ ನಟಿಯಾಗುವ ಆಸೆಯಿಂದ ಬರುತ್ತಾರೆ. ನಾನು ಕೂಡ ಶ್ರೀದೇವಿ, ನಗ್ಮಾ ರೀತಿ ದೊಡ್ಡ ನಟಿಯಾಗುತ್ತೇನೆ ಎನ್ನುವ ಆಸೆಯಿಂದ ಎಲ್ಲರೂ ಬರ್ತಾರೆ. ಆದರೆ ಕೆಲವೊಮ್ಮೆ ಇಂತಹ ಸಮಸ್ಯೆಗಳು ಎದುರಾಗುತ್ತದೆ” ಎಂದು ಆಮನಿ ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap