ಹೈದರಾಬಾದ್:
ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ಟಾಲಿವುಡ್ ನಟ ಹರಿಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಫಿಲ್ಮ್ ನಗರದ ಮಹಾಪ್ರಸ್ಥಾನಂ ನಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.
ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಮಧ್ಯಾಹ್ನ 1.30 ರವರೆಗೆ ಅಂತಿಮ ದರ್ಶನ ನಡೆಯುತ್ತದೆ. ಆ ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಹರಿಕೃಷ್ಣ ಅವರ ನಿವಾಸದಿಂದ ಫಿಲ್ಮ್ ನಗರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ಹರಿಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಈಗಾಗಲೇ ಚಿತ್ರರಂಗ ಗಣ್ಯರು ಹಾಗೂ ರಾಜಕೀಯ ಗಣ್ಯರು ಸೇರಿದಂತೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿ, ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ.
ನಿನ್ನೆ ಬೆಳಗಿನ ಜಾವ 4.30ರ ಸಮಯದಲ್ಲಿ ಅಭಿಮಾನಿಯ ಮಧುವೆಯಲ್ಲಿ ಪಾಲ್ಗೊಳ್ಳು ನೆಲ್ಲೂರು ಜಿಲ್ಲೆಯ ಕಾವಲಿಗೆ ತೆರಳುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ