ಇಂದು ನಾಗರಿಕ ಸೇವಾ ಪರೀಕ್ಷಾ ಪ್ರವೇಶ ಕಾರ್ಯಕ್ರಮ

ತುಮಕೂರು:

              ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ದೇವರಾಜ ಅರಸು ಅಧ್ಯಯನ ಪೀಠ, ಕೃಷಿಕ್ ಸರ್ವೋದಯ ಫೌಂಡೇಷನ್ ತುಮಕೂರು ಶಾಖೆ ಇವರ ವತಿಯಿಂದ ಸೆ.6 ರಂದು ಬೆಳಗ್ಗೆ 10 ಗಂಟೆಗೆ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿವಿ ಆವರಣ ಇಲ್ಲಿ ನಾಗರಿಕ ಸೇವಾ ಪರೀಕ್ಷಾ ಪ್ರವೇಶ-2018 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
                ಅಧ್ಯಕ್ಷತೆಯನ್ನು ಕುಲಪತಿಗಳಾದ ಪ್ರೊ.ವೈಎಸ್.ಸಿದ್ದೇಗೌಡ ವಹಿಸಲಿದ್ದು, ಉದ್ಘಾಟನೆಯನ್ನು ವಿಶ್ರಾಂತ ಅಧ್ಯಾಪಕ ಡಾ.ವೈ.ಕೆ.ಪುಟ್ಟಸೋಮೇಗೌಡ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿ ಪ್ರೊ.ಕೆ.ನಾರಾಯಣಗೌಡ ಆಗಮಿಸುವರು.
ಅಂದು ಬೆಳಗ್ಗೆ 11.30 ರಿಂದ 12.30ರವರೆಗೆ ವಿಶೇಷ ಉಪನ್ಯಾಸ ನಡೆಯಲಿದ್ದು, ಪ್ರೊ.ಡಿ.ಜೀವನ್ ಕುಮಾರ್ ನಾಗರಿಕ ಸೇವಾ ಪರೀಕ್ಷೆಗಳ ತಯಾರಿ ಕೆಲವು ಒಳನೋಟಗಳು ಕುರಿತು ಉಪನ್ಯಾಸ ನೀಡುವರು. ಕೆ.ಅರಮನಾರಾಯಣ ಅಸಾಧ್ಯ ಎನ್ನುವುದೊಂದು ಭ್ರಮೆ ಎಂಬ ವಿಷಯವಾಗಿ ಮಾತನಾಡುವರು. ಸೆ.7 ರಂದು ಬೆಳಗ್ಗೆ 10.30 ರಿಂದ 11.30ರವರೆಗೆ ಟಿ.ತಿಮ್ಮೇಗೌಡ ಅವರು ಯುಪಿಎಸ್‍ಸಿ ಪರೀಕ್ಷೆಗಳ ಸಿದ್ಧತೆ ವಿಷಯವಾಗಿ ಉಪನ್ಯಾಸ ನೀಡುವರು. 11.30 ರಿಂದ 12.30ರವರೆಗೆ ಕೆ.ವಿ.ಆರ್.ಠ್ಯಾಗೋರ್ ಅವರು ಕಠಿಣ ಪರೀಕ್ಷೆಯ ಪ್ರವೇಶದ್ವಾರಗಳು ಎಂಬ ವಿಷಯವಾಗಿ ಮಾತನಾಡುವರು.

Recent Articles

spot_img

Related Stories

Share via
Copy link
Powered by Social Snap