ಇಂದು ಬಕ್ರೀದ್ ಹಬ್ಬ ಆಚರಣೆ : ಸಮಾಜದಲ್ಲಿ ಶಾಂತಿ ನೆಲೆಸಲು ಎರಡೂ ಸಮುದಾಯದ ಸಹಕಾರ ಅಗತ್ಯ.

ಚಳ್ಳಕೆರೆ:

  ಪ್ರತಿವರ್ಷದಂತೆ ಈ ವರ್ಷವೂ ಸಹ ಮುಸ್ಲಿಂ ಸಮುದಾಯ ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಿದ್ದು, ಯಾವುದೇ ರೀತಿಯ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕಿದೆ. ಮುಸ್ಲಿಂ ಸಮಾಜದ ಬಂಧುಗಳು ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ಥತೆ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿಯಮಗಳನ್ನು ಪಾಲಿಸುವಂತೆ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ತಿಳಿಸಿದರು.

  ಅವರು, ಸೋಮವಾರ ಸಂಜೆ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಲಾಖೆ ಹಮ್ಮಿಕೊಂಡಿದ್ದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಶಾಂತಿ ಸಮಿತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಹಲವಾರು ವರ್ಷಗಳಿಂದ ಚಳ್ಳಕೆರೆ ನಗರದಲ್ಲಿ ಮುಸ್ಲಿಂ ಭಾಂದವರು ಆಚರಿಸುವ ಎಲ್ಲಾ ಹಬ್ಬಗಳಿಗೂ ಹಿಂದು ಬಾಂಧವರು ಸಹಕಾರ ನೀಡುತ್ತಿದ್ಧಾರೆ. ಎರಡೂ ಸಮುದಾಯದಲ್ಲೂ ಸಾಮರಸ್ಯೆ ಮೂಡಿಸಲು ಇಲಾಖೆ ಮುಂದಾಗಿದೆ. ಶಾಂತಿ ಹಾಗೂ ಸೌಹಾರ್ಥಿತ ಹಬ್ಬವನ್ನು ಆಚರಣೆ ಮಾಡುವಂತೆ ಅವರು ಕರೆ ನೀಡಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ಮುಸ್ಲಿಂ ಬಂಧುಗಳು ಆಚರಿಸಲು ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಶಾಂತಿಯುತವಾಗಿ ನಡೆಯುತ್ತಾ ಬಂದಿವೆ. ವಿಶೇಷವಾಗಿ ಇಲ್ಲಿನ ಹಿಂದು ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ಧಾರೆ. ಎರಡೂ ಸಮುದಾಯದಲ್ಲೂ ಸಹ ಯಾವುದೇ ರೀತಿಯ ಅನುಮಾನಗಳಿಗೆ ಆಸ್ಪದ ಇಲ್ಲದಂತೆ ಉತ್ತಮ ವಿಶ್ವಾಸದ ಗೌರವವನ್ನು ಎರಡೂ ಸಮುದಾಯಗಳು ಹೊಂದಿವೆ. ಎರಡೂ ಸಮುದಾಯದಲ್ಲಿರುವ ಪರಸ್ವರ ಉತ್ತಮ ತಿಳುವಳಿಕೆ ಕಾರ್ಯಕ್ರಮ ಯಾವುದೇ ರೀತಿಯ ದೋಷವಿಲ್ಲದಂತೆ ಮುಕ್ತಾಯವಾಗುತ್ತದೆ. ನೀವು ನೀಡುವ ಎಲ್ಲಾ ರೀತಿಯ ಸಹಕಾರಕ್ಕೆ ನಮ್ಮ ಪೊಲೀಸ್ ಇಲಾಖೆ ಅಬಾರಿಯಾಗಿದೆ ಎಂದರು.

  ಕಾರ್ಯಕ್ರಮದಲ್ಲಿ ಪಿಎಸ್‍ಐ ಕೆ.ಸತೀಶ್‍ನಾಯ್ಕ ಮುಸ್ಲಿಂ ಸಮುದಾಯದ ಮುಖಂಡರಾದ ಅತಿಕುಉರ್ ರೆಹಮಾನ್, ಬಾಬು, ಹಯಾತ್ ಬಷೀರ್, ಸೈಯದ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap