ಹೊಸದುರ್ಗ
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಶ್ರೀಯುತ ಸಂತೋಷ್ ಜಿ ಅವರನ್ನು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ಶಾಂತವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕುಂಚಿಟಿಗ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ದಿನಾಂಕ 7.12.2018 ರಂದು ಬೆಂಗಳೂರಿನ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸಭೆ ನಡೆಸಲಾಯಿತು
ಕುಂಚಿಟಿಗ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಹಾಗು ಸಮಾಜದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವಂತೆ ಸಂತೋಷ್ ಜಿ ಅವರಲ್ಲಿ ಮತ್ತು ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಅವರೊಂದಿಗೆ ಕುಂಚಿಟಿಗ ಸಮಾಜದ ರಾಜಕೀಯ ಶೈಕ್ಷಣಿಕ ಧಾರ್ಮಿಕ ಹಾಗು ಮೀಸಲಾತಿ ಸೌಲಭ್ಯಗಳ ಕುರಿತು ಚರ್ಚಿಸಿ ನಮ್ಮ ಸಮಸ್ಯೆಗಳಿಗೆ ನ್ಯಾಯ ಕೋಡಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು ಶೀಘ್ರದಲ್ಲಿ ದೆಹಲಿಗೆ ನಿಯೋಗ ತೆರಳಲಿದ್ದು ಅದಕ್ಕೆ ನಿಮ್ಮ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು
ಈ ನಿಯೋಗದಲ್ಲಿ ಅಖಿಲ ಕರ್ನಾಟಕ ಕುಂಚಿಟಿಗ ಮಹಾಮಂಡಲ ರಾಜ್ಯ ಅಧ್ಯಕ್ಷ ಕೆ ಬಸವಾನಂದರವರು ನಿರ್ದೇಶಕರಾದ ಹರಿಯಬ್ಬೆ ಹೆಂಜಾರಪ್ಪ ಮಂಡೆರ್ ಸತೀಶ್ ಕುಮಾರ್ ಸಮಾಜದ ಮುಖಂಡರಾದ ಹನುಮಂತಗೌಡರು ಹರ್ಷ ನಿವೃತ್ತ ಎಸಿಪಿ ಶ್ರೀನಿವಾಸ್ ಮೂರ್ತಿ ಶೇರಿದನ್ ಸೇರಿದಂತೆ ಸಮಾಜದ ಪ್ರಮುಖರು ಭಾಗವಹಿಸಿದ್ದರು ಕುಂಚಟಿಗ ಮಹಾಮಂಡಲದ ರಾಜ್ಯ ಅಧ್ಯಕ್ಷರಾದ ರವರು ಬಸವಾನಂದ ರವರು ಮಾತನಾಡಿ ಈಗಾಗಲೇ 2015 ರಲ್ಲಿ ಡಾ.ಶ್ರೀ ಶಾಂತವೀರ ಸ್ವಾಮೀಜಿಯವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದ್ದು ಅದಷ್ಟು ಬೇಗ ಕುಂಚಿಟಿಗ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ತಾವುಗಳು ಕೇಂದ್ರ ಸರ್ಕಾರ ದ ಗಮನಕ್ಕೆ ತಂದು ನಮ್ಮ ಬಹು ದಿನಗಳ ಬೇಡಿಕೆಯನ್ನು ಪರಿಹರಿಸಲು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
