ಇಸ್ರೋ ಸಾಧನೆ ನಮಗೆ ಪ್ರೇರಣೆಯಾಗಲಿದೆ : ಅಮೆರಿಕ

ವಾಷಿಂಗ್ಟನ್:

     ಚಂದ್ರನ ದಕ್ಷಿಣದ ದೃವದ ಮೇಲೆ ರೋವರ್ ಇಳಿಸುವ ಭಾರತದ ಕಾರ್ಯಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದ್ದು ,ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೇರಿಕ ಕೂಡ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

     ಚಂದರಯಾನದ ಕುರಿತಂತೆ ಟ್ವೀಟ್ ಮಾಡಿರುವ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಚಿವಾಲಯ, ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದೆ. ‘ಚಂದ್ರನಲ್ಲಿಗೆ ರೋವರ್ ಕಳುಹಿಸುವುದು ಕಡಿಮೆ ಸಾಧನೆ ಏನಲ್ಲ. 

      ‘ಇಸ್ರೋ ವಿಜ್ಞಾನಿಗಳ ಅದ್ಭುತ ಕಾರ್ಯವನ್ನು ನಾವು ಶ್ಲಾಘಿಸುತ್ತೇವೆ ಮತ್ತು ಇದು ನಮ್ಮನ್ನು ನಮ್ಮ ಮುಂದಿನ ಬಾಹ್ಯಾಕಾಶ ಯಾತ್ರೆಗಳಿಗೆ  ಉತ್ತೇಜನ ನೀಡುತ್ತದೆ ಎಂದಿದ್ದಾರೆ . ಚಂದ್ರಯಾನ 2 ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ. ಇದು ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಪ್ರೇರಣಾ ಶಕ್ತಿಯಾಗಲಿದೆ ಎಂದಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ