ಸಂಜೋತಾ ಎಕ್ಸ್ ಪ್ರೆಸ್ ಸಂಚಾರ ರದ್ದು ಮಾಡಿದ ಪಾಕ್..!

ಇಸ್ಲಾಮಾಬಾದ್:
    370ನೇ ಕಲಂ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಪ್ರತಿಕ್ರಿಯೆಯಾಗಿ ಲಾಹೊರ್ ಮತ್ತು ದೆಹಲಿಯ ಸಂಪರ್ಕ ಕೊಂಡಿಯಾಗಿದ್ದ ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ರದ್ದು ಮಾಡುವ ಮುಲಕ ಆಕ್ರೋಶ ಹೊರಹಾಕಿದೆ.
   ನಿನ್ನೆ ರಾಷ್ಟ್ರೀಯ ಭದ್ರತಾ ಸಮಿತಿ(ಎನ್ಎಸ್ ಸಿ) ಸಭೆ ನಡೆಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದರು.
    ಇನ್ನು ಮುಂದೆ ದೆಹಲಿಯಲ್ಲಿ ನಮ್ಮ ರಾಯಭಾರಿ ಇರುವುದಿಲ್ಲ ಮತ್ತು ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಲಾಗು ವುದು ಎಂದು ಎನ್ ಎಸ್ ಸಿ ಸಭೆಯ ನಂತರ ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್ ಮಹಮೂದ್ ಖುರೇಷಿ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ