ಗುತ್ತಲ:
ಶ್ರಾವಣ ಮಾಸ ಕೊನೆಯ ಸೋಮವಾರವಾದ ಇಂದು ಪಟ್ಟಣದ ಹೊರವಲಯದಲ್ಲಿರುವ ಚಂದ್ರಶೇಖರ ಪುರಾತನ ದೇವಸ್ಥಾನದಲ್ಲಿ ಶಿವನ ರೂಪದ ಈಶ್ವರ ಮೂರ್ತಿಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಪೂಜೆ ಸಲ್ಲಿಸಿಲಾಯಿತು. ಇಲ್ಲಿ ಪ್ರತಿ ವರ್ಷದ ಪದ್ದತಿಯೆಂತೆ ಒಂದು ವಾರ ಕಾಲ ಪರಿಯಂತ ಪ್ರತಿ ದಿನ ಹಗಲು ಮತ್ತು ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆಯಿಂದಲೇ ಭಕ್ತಾಧಿಗಳು ದೇವಸ್ಥಾನಕ್ಕೆ ತೆರಳು ಹಣ್ಣು ಕಾಯಿ ಮತ್ತು ನೈವಧ್ಯ ಅರ್ಪಿಸಿ ಭಕ್ತಿ ಭಾವ ಮೆರದರು. ನಂತರ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಶಿವಯ್ಯ ಚರಂತಿಮಠ, ಬಸಯ್ಯ ಹೇಮಗಿರಿಮಠ, ಮಂಜುನಾಥ ಬುಕ್ಕಶೆಟ್ಟಿ, ಮಾಲತೇಶ ಕಾಗಿನೆಲ್ಲಿ, ಗಿರೀಶ ತರ್ಲಿ, ಹಾಗೂ ಭಕ್ತಾಧಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ