ದೆಹಲಿ:
ನಮ್ಮ ದೇಶದ ರಕ್ಷಣೆಗಾಗಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ
ಯೋಧರ ಶೌರ್ಯದ ಬಗ್ಗೆ ನಮಗೆ ನಂಬಿಕೆಯಿದೆ. ದಾಳಿ ನಡೆಸಿದವರಿಗೆ ಸೂಕ್ತ ಪಾಠ ಕಲಿಸಲು ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಾವು ಉಗ್ರರಿಗೆ ಕಲಿಸುವ ಪಾಠದ ಧ್ವನಿ ಇಡೀ ಜಗತ್ತಿಗೆ ಕೇಳಿಸಬೇಕಿದೆ. ಯಾರು ಈ ದಾಳಿಗೆ ಕುಮ್ಮಕ್ಕು ನೀಡಿದ್ದಾರೋ ಅವರಿಗೆ ಭಾರತ ತಕ್ಕ ಪಾಠ ಕಲಿಸಲಿದೆ. ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನ ವಿನಾಶದ ಹಾದಿಯಲ್ಲಿ ಸಾಗುತ್ತಿದೆ. ಪಾಕಿಸ್ತಾನ ಭಾರತ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ಆ ಕನಸು ಎಂದಿಗೂ ಯಶಸ್ವಿಯಾಗುವುದಿಲ್ಲ. ಉಗ್ರರು ತಾವು ಮಾಡಿದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕ ಸಂಘಟನೆಗೆಳು ತಪ್ಪನ್ನು ಮಾಡಿವೆ.
ಪಾಕಿಸ್ತಾನ ನಮ್ಮ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಈ ದಾಳಿಗಳಿಂದ ತಮ್ಮ ಕನಸು ನನಸ್ಸಾಗುತ್ತದೆ ಎಂದರೇ ಅದು ಮೂಖರ್ತನ. ನಾವು ಯುದ್ದಕ್ಕೆ ಸನ್ನದ್ದರಾಗಿದ್ದೇವೆ. ಉಗ್ರರ ಕೃತ್ಯಕ್ಕೆ ಸೂಕ್ತ ಶಿಕ್ಷೆ ಸಿಗಲಿದೆ. ಈ ಮೂಲಕ ಹುತಾತ್ಮ ಯೋಧರ ಕನಸನ್ನು ನನಸು ಮಾಡುತ್ತೇವೆ ಎಂದು ಭರವಸೆ ನೀಡಿದರು.