ತಿಪಟೂರು.
ತುಮಕೂರು ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ನೆಡೆದ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ತಿಪಟೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲಿನ “ಉತ್ತಮ ಗುಣಮಟ್ಟಕ್ಕೆ” ತುಮಕೂರು ಜಿಲ್ಲೆಗೆ ಶೇಕಡ 92 ಸರಾಸರಿಯಲ್ಲಿ ಹಾಲನ್ನು ಸರಬರಾಜು ಮಾಡಿ ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದೆ. ಪ್ರಶಸ್ತಿಯನ್ನು ತುಮಕೂರು ಹಾಲು ಒಕ್ಕೂಟದ ಅದ್ಯಕ್ಷರಾದ ಕೊಂಡವಾಡಿ ಚಂದ್ರಶೇಖರ್‍ರವರು ತಿಪಟೂರು ನಿರ್ಧೇಶಕರಾದ ಮಾದಿಹಳ್ಳಿ ಪ್ರಕಾಶ್‍ರವರಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಜೊತೆಯಲ್ಲಿ ಕುಣಿಗಲ್ ನಿರ್ಧೇಶಕಕ ಕೃಷ್ಣಕುಮಾರ್, ಮಾಜಿ ಅದ್ಯಕ್ಷ ಹಾಗೂ ನಿರ್ಧೇಶಕ ಹಳೇಮನೆ ಶಿವನಂಜಪ್ಪ, ಉಪವ್ಯವಸ್ಥಾಪಕರಾದ ಚಂದ್ರಶೇಖರ್, ವಿಸ್ತರಣಾದಿಕಾರಿಗಳಾದ ಮೋಹನ್, ಮಲ್ಲಿಕಾರ್ಜುನ್, ರಾಮನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅರುಣ್, ಅರುಳಗುಪ್ಪೆ ಕಾರ್ಯದರ್ಶಿ ನೇತ್ರಾನಂದ ಮತ್ತಿತ್ತರು ಇದ್ದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತಾನಾಡಿದ ತುಮೂಲು ನಿರ್ಧೇಶಕ ಮಾದಿಹಳ್ಳಿ ಪ್ರಕಾಶ್ ssಸತತ ನಾಲ್ಕು ವರ್ಷಗಳಿಂದ ನಾವು ನಮ್ಮ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟಕ್ಕೆ ಪ್ರಥಮ ಸ್ಥಾನವನ್ನು ಪಡೆದು ಕೊಳ್ಳುತ್ತಾ ಬಂದಿದ್ದು ಇನ್ನೂ ಮುಂದೆಯೂ ಸಹ ಇದೇ ರೀತಿಯಲ್ಲಿ ಮುಂದುವರೆದು ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗುವುದು, ಹಾಗೂ ಈ ಪ್ರಶಸ್ತಿಯನ್ನು ಪಡೆದು ಕೊಳ್ಳಲು ತಿಪಟೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಹಾಗೂ ಅವರ ಪ್ರಾಮಾಣಿಕ ಕಾಯಕವೇ ಕಾರಣವಾಗಿದೆ. ಅದ್ದರಿಂದ ನಮ್ಮ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕÀರಿಗೆ, ರೈತರಿಗೆ, ಉತ್ಪಾದಕರ ಸಂಘದ ಕಾರ್ಯಕಾರಿ ಮಂಡಳಿಯವರಿಗೆ, ಅಧಿಕಾರಿ ವರ್ಗದವರಿಗೆ ಇದೇ ಸಂಧರ್ಬದಲ್ಲಿ ಅಬಿನಂದನೆಯನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ