ಶಿರಾ ದಸರಾ ಉತ್ಸವಕ್ಕೆ ಶಾಸಕರಿಂದ ಚಾಲನೆ

0
23

ಶಿರಾ

       ಶಿರಾ ನಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ದುರ್ಗಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಡೆದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಶಾಸಕ ಬಿ.ಸತ್ಯನಾರಾಯಣ್ ಚಾಲನೆ ನೀಡಿದರು.

       ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ದುರ್ಗ ಅನ್ನ ಸಂತರ್ಪಣಾ ಮಂಡಳಿ, ದಸರಾ ದೀಪಾಲಂಕಾರ ಸಮಿತಿ, ನವರಾತ್ರಿ ಉತ್ಸವ ಮತ್ತು ಪೂಜಾ ಸಮಿತಿಯ ವತಿಯಿಂದ ಪ್ರತಿ ವರ್ಷವೂ ಶರನ್ನವರಾತ್ರಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಈ ವರ್ಷವೂ ಕೈಗೊಳ್ಳಲಾಗಿದ್ದ ದಸರಾ ಉತ್ಸವದ ಕಾರ್ಯಕ್ರಮಗಳಿಗೆ ಶಾಸಕ ಬಿ.ಸತ್ಯನಾರಾಯಣ್ ಚಾಲನೆ ನೀಡಿದರು.

        ಬಿ.ಸತ್ಯನಾರಾಯಣ್ ಮಾತನಾಡಿ, ಶಿರಾ ನಗರದ ದುರ್ಗಮ್ಮದೇವಿಗೆ ತನ್ನದೇ ಆದ ಐತಿಹ್ಯವಿದ್ದು, ಗ್ರಾಮದೇವತೆಯೂ ಆದ ದುರ್ಗಾಮಾತೆಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಕ್ತ ವರ್ಷವೂ ಹೇಮಾವತಿಯ ನೀರು ಶಿರಾ ನಗರಕ್ಕೆ ಹರಿದು ಬರುತ್ತಿದ್ದು, ಕೆರೆಯನ್ನು ತುಂಬಿಸಿಕೊಳ್ಳಲು ಕ್ರಿಯಾಶೀಲ ಪ್ರಯತ್ನ ಮಾಡಲಾಗುತ್ತಿದೆ. ದುರ್ಗಾದೇವಿ ಆಶೀರ್ವಾದದಿಂದ ವರುಣನ ಕೃಪೆಯಾದಲ್ಲಿ ಶಿರಾ ಕೆರೆಯು ಭರ್ತಿಯಾಗಿ ಜನರ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದರು.

        ಶ್ರೀ ದುರ್ಗಾದೇವಿಯ ನೂತನ ದೇವಾಲಯದ ಅಭಿವೃದ್ಧಿ ಕಾರ್ಯ ನಡೆದಿದ್ದು, ಭಕ್ತಾದಿಗಳ ಸಹಕಾರದಿಂದ ಈ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಅಗತ್ಯವಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ದೇವಾಲಯದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದು ಮಾಲಿ ಸುರೇಶ್ ತಿಳಿಸಿದರು.ದಸರಾ ಸಮಿತಿಯ ಮಾಲಿ ಸುರೇಶ್, ನಗರಸಭಾ ಸದಸ್ಯರಾದ ಮಂಜುನಾಥ್, ಆಂಜಿನಪ್ಪ, ಶಾರದಾ ಶಿವಕುಮಾರ್, ಶ್ರೀನಿವಾಸ್, ಅರುಣ್‍ಕುಮಾರ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here