
ನವದೆಹಲಿ : ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇ. 15 ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕöÈತ ದರ ಇಂದಿನಿAದಲೇ ಜಾರಿಗೆ ಬರಲಿದೆ. ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಕೇಂದ್ರ ಸರ್ಕಾರ ಈ ಕ್ರಮದಿಂದ ಚಿನ್ನ, ಬೆಳ್ಳಿ ಧಾರಣೆ ಮತ್ತಷ್ಟು ದುಬಾರಿಯಾಗಲಿದೆ.
ದೇಶದ ವಿದೇಶಿ ವಿನಿಮಯ ಮೀಸಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೋಷಿಯಲ್ ವೆಲ್‌ಫೇರ್ ಸರ್ಚಾರ್ಜ್ ಹಾಗೂ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಪರಿಷ್ಕರಿಸಲಾಗಿದ್ದು, ನೂತನ ದರ ಇಂದಿನಿAದಲೇ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡುವ ಪ್ರಕಟಣೆ ತಿಳಿಸಿದೆ.
ಚಿನ್ನ ಖರೀದಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮತ್ತು ವಿದೇಶಿ ವಿನಿಮಯ ಉಳಿಸಲು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ ಕೆಲ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆಯಾಗಿದೆ.
ಆಮದು ಸುಂಕ ಏರಿಕೆಯಿಂದಾಗಿ ಚಿನ್ನದ ದರ ಪ್ರತಿ 10 ಗ್ರಾಂಗೆ 8,838, ಪ್ರತಿ ಕೆಜಿ ಬೆಳ್ಳಿ ದರ 18,920 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದೆ. ಈ ವಹಿವಾಟು ಮಧ್ಯಾಹ್ನ ನಂತರ ಇನ್ನಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಎಂಸಿಎಕ್ಸ್ ಚಿನ್ನದ ವ್ಯವಹಾರ ಬಹುತೇಕ ಚಿನ್ನದ ಬದಲಿಗೆ ಎಲೆಕ್ಟಾçನಿಕ್ ರೂಪದಲ್ಲಿ ಚಿನ್ನದ ಬೆಲೆ ಏರಿಳಿತಗಳ ಮೇಲೆ ಫ್ಯೂಚಸ್ ಒಪ್ಪಂದ ಮೂಲಕ ವ್ಯಾಪಾರ ಮಾಡುವ ವೇದಿಕೆಯಾಗಿದ್ದು, ಇದು ಹೂಡಿಕೆದಾರರ ಚಿನ್ನದ ಬೆಲೆ ಏರಿಳಿತದಿಂದ ಲಾಭ ಪಡೆಯಲು ಅನುಕೂಲವಾಗುತ್ತದೆ.
ಚಿನ್ನವನ್ನು ಬಹುತೇಕವಾಗಿ ಖರೀದಿಸದೆ ಭವಿಷ್ಯದ ದಿನಾಂಕದAದು ನಿಗದಿತ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ರಾಜಕೀಯ ಹಾಗೂ ಆರ್ಥಿಕ ಸುದ್ಧಿಗಳ ಆಧಾರದ ಮೇಲೆ ಚಿನ್ನ , ಬೆಳ್ಳಿ ಧಾರಣೆ ಬದಲಾಗುತ್ತದೆ.
ಭಾರತದ ಚಿನ್ನದ ಆಮದು ಪ್ರಮಾಣ 2025-26ರಲ್ಲಿ ಶೇ. 24 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಮೂಲಕ ದಾಖಲೆಯ 71.98 ಬಿಲಿಯನ್ ಡಾಲರ್ ತಲುಪಿದೆ.
ಕಳೆದ ಕೆಲವು ತಿಂಗಳುಗಳಿAದ ಚಿನ್ನದ ದರ ಗಗನಕ್ಕೇರಿದೆ. ದೆಹಲಿಯಲ್ಲಿ 1,500 ರೂ ಏರಿಕೆಯಾಗಿ ಪ್ರತಿ 10 ಗ್ರಾಂಗೆ 1,56,800 ರೂ. ತಲುಪಿದ್ದರೆ, ಬೆಳ್ಳಿ ದರ 12,000 ರೂ. ಏರಿಕೆಯಾಗಿ ಪ್ರತಿ ಕಿಲೋ ಗ್ರಾಮ 2,77,000 ರೂ. ತಲುಪಲಿದೆ.








