ಎಚ್‍ಎಎಲ್ ಘಟಕ ಮತ್ತೊಂದು ಸುಳ್ಳಿನ ಫುಡ್‍ಪಾರ್ಕ್ ಆಗದಿರಲಿ: ಸಿಪಿಐ

ತುಮಕೂರು

    ಬಾರಿ ಪ್ರಚಾರದೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರಿಂದ ಫೆ.6ರಂದು ಗುಬ್ಬಿ ತಾಲ್ಲೂಕಿನಲ್ಲಿ ಲೋಕಾರ್ಪಣೆಗೊಳ್ಳುತ್ತಿರುವÀ ಹೆಚ್‍ಎಎಲ್. ಘಟಕ ಸುಳ್ಳಿನ ಭರವಸೆಯ ಮತ್ತೊಂದು ಪುಡ್ ಪಾರ್ಕ ಆಗದಿರಲಿ ಎಂದು ಭಾರತ್ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಎಚ್ಚರಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಮೊದಲ ಬಾರಿಗೆ ವಸಂತಾ ನರಸಾಪುರದಲ್ಲಿ 110 ಎಕರೆಯ ಫುಡ್‍ಪಾರ್ಕ್‍ಉದ್ಘಾಟನೆಗೆ ತುಮಕೂರಿಗೆ ಆಗಮಿಸಿದ ಮೋದಿ ಅವರು 10 ಸಾವಿರ ಉದ್ಯೋಗ ನೀಡುª ಭರವಸೆ ನೀಡಿ ಸುತ್ತ 200 ಕಿ.ಮೀ ವ್ಯಾಪ್ತಿಯಲ್ಲಿ ರೈತರು ಬೆಳೆದ ಹಣ್ಣುತರಕಾರಿ ಖರೀದಿಸಿ ಅವನ್ನು ಮಾರುಕಟ್ಟೆ ಉತ್ಪನ್ನವಾಗಿಸಿ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಲಾಗುವುದು ಎಂದಿದ್ದರು.

    ಆದರೆ ಈ ಪುಡ್‍ಪಾರ್ಕಿನಲ್ಲಿ ಇದುವರೆಗೂ ಸ್ಥಳೀಯ ರೈತರ ಒಂದು ಕೆ.ಜಿ. ತರಕಾರಿ, ಹಣ್ಣನ್ನು ಖರೀದಿಸಿಲ್ಲ. ಬದಲಾಗಿ ನೂರಾರು ಕೋಟಿ ಸಬ್ಸಿಡಿ ಪಡೆದ ನಂತರ ಪುಡ್‍ಪಾರ್ಕ್‍ಅನ್ನು ರಿಲಯನ್ಸ್‍ನವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಸ್ಥಳೀಯರಿಗೆ ಉದ್ಯೋಗವಕಾಶಗಳು ಮರೀಚಿಕೆಯಾಯಿತು. ಅದರಂತೆ ಎಚ್‍ಎಎಲ್ ಘಟಕವೂ ಆದರೆ ಮುಂದೆ ಜಿಲ್ಲೆಗೆ ಭೇಟಿಕೊಡುವ ಸಂದರ್ಭದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ ಎರಡು ಕೋಟಿ ಉದ್ಯೋಗ,ಎಲ್ಲರ ಖಾತೆಗೆ 15 ಲಕ್ಷ ರೂ ಕಪ್ಪು ಹಣ ಸೇರಿದಂತೆ ಯಾವುದೇ ಭರವಸೆ ಈಡೇರಿಲ್ಲ.ಬದಲಾಗಿ ಉದ್ಯೋಗ ಕಳೆದುಕೊಂಡವರೇ ಹೆಚ್ಚು.ಹಲವು ಕಾನೂನುಗಳನ್ನು ತಿದ್ದುಪಡಿ ಮಾಡಿ ಅದಾನಿಗೆ ಅನುಕೂಲ ಮಾಡಿಕೊಟ್ಟು, ಎಲ್.ಐ.ಸಿ. ಮತ್ತು ಎಸ್.ಬಿ.ಐ ನೀಡಿದ್ದ ಸಾಲ, ಜನರ ತೆರಿಗೆ ಹಣದ ಹೂಡಿಕೆ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕವನ್ನು ಸೃಷ್ಟಿಸಿದೆ. ಇನ್ನು ಎಷ್ಟು ದಿನ ಇದೇ ಸುಳ್ಳನ್ನು ಮುಂದುವರೆಸುತ್ತೀರಿ ಎಂದು ಪ್ರಶ್ನಿಸಿದರು.

    ತುಮಕೂರು ತಾಲ್ಲೂಕು ಮಾರ್ಗದಲ್ಲಿ ಹಾದುಹೋಗಿರುವ ಬೆಂಗಳೂರು-ಶಿವಮೊಗ್ಗ ಪವರ್ ಲೈನ್‍ಗೆ 3 ದಶಕಕಳೆದರೂ ಪರಿಹಾರ ಸಿಕ್ಕಿಲ್ಲ. ಕೆಲವು ರೈತರ ಜಮೀನಿನಲ್ಲಿ 10-12 ವಿದ್ಯುತ್‍ಟವರ್ ಹಾದುಹೋಗಿದ್ದು, ಕೃಷಿಯನ್ನೆ ಮಾಡದಂತಹ ಸ್ಥಿತಿ ಇದೆ. ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಗಮನಹರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿಗಳಾದ ಚಂದ್ರಶೇಖರ್,ಗೋವಿಂದರಾಜು, ಖಜಾಂಚಿ ಅಶ್ವಥನಾರಾಯಣ, ಜಿಲ್ಲಾ ಮಂಡಳಿ ಸದಸ್ಯರಾದ ಶಶಿಕಾಂತ್, ಗೋವಿಂದರಾಜು, ರುದ್ರಪ್ಪ, ರವಿಪ್ರಸಾದ್, ವೆಂಕಟೇಶ್, ಗಂಗರಾಜು, ಭೀಮಣ್ಣ ಇತರರಿದ್ದರು

 

Recent Articles

spot_img

Related Stories

Share via
Copy link