ಬಳ್ಳಾರಿ:
ನ್ಯಾಷನಲ್ ಮಿನರಲ್ ಡೆವಲಪಪ್‍ಮೆಂಟ್ ಕಾರ್ಪೋರೇಷನ್ ( ಎನ್ ಎಂ ಡಿ ಸಿ ) ಇದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಒಂದು ಉದ್ಯಮ. ಈ ಉದ್ಯಮದಲ್ಲಿ ಹಾಲಿ ಹುದ್ದೆಗಳ ನೇಮಕಾತಿಗಾಗಿ ಈಚೆಗೆ ಟೆಕ್ನಿಕಲ್ ಕೋರ್ಸ ಪಡೆದ ವಿಧ್ಯಾರ್ಥಿಗಳಿಂದ ಲಿಖಿತ ಪರೀಕ್ಷೆಯನ್ನು ನೆಡೆಸಲಾಯಿತು.ಸುಮಾರು 48 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.
ತೆಲಂಗಾಣ, ಆಂದ್ರ ಪ್ರದೇಶಢ, ಒರಿಸ್ಸಾ,ಛತ್ತೀಸ್‍ಘಡ್,ಮತ್ತು ಕರ್ನಾಟಕದ 48 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಟರ್ನರ್,ಫಿಟ್ಟರ್,ವೆಲ್ಡರ್, ಆಟೋ ಎಲೆಕ್ಟ್ರಿಷಿಯನ್,ಎಚ್‍ಇಎಂ ಆಪರೇಟರ್, ಗ್ರೇಡ್ 3. ಎಚ್‍ಇಎಂ ಮೆಕಾನಿಕಲ್ ಮತ್ತು ಕಂಟ್ರೋಲ್ ಅಸಿಸ್ಟೆಂಟ್ ಹುದ್ದೆ ಸೇರಿದಂತೆ ಒಟ್ಟು 160 ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಆದರೆ ಈ ನೇಮಕಾತಿಯಲ್ಲಿ ಬಾರೀ ಗೋಲ್ ಮಾಲ್ ನಡೆದಿದೆ ಎಂದು ಹಲವು ಸಂಘಟನೆಗಳು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಸೇರಿದಂತೆ ಹಲವರ ಆರೋಪ ಬಲವಾಗಿ ಕೇಳಿ ಬರುತ್ತಿದೆ ಬಳ್ಳಾರಿ ಜಿಲ್ಲೆಯಲ್ಲಿ 9 ವಿದಾನ ಸಬಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 12 ಲಕ್ಷ ಜನ ನಿರುದ್ಯೋಗಿಗಳು ಇದ್ದಾರೆ.
ಸ್ಥಳೀಯರಿಗೆ ಉದ್ಯೋಗವಿಲ್ಲ ಇನ್ನೂ ನೆರೆ ರಾಜ್ಯಗಳಿಂದಲೂ ಈ ಎನ್ ಎಂ ಡಿ ಸಿ ಉದ್ಯಮದಲ್ಲಿ ಉದ್ಯೋಗ ಪಡೆಯಲು ವಿಧ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದಾರೆ ಅಲ್ಲದೇ ಈ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ವಿಧ್ಯಾರ್ಥಿಗಳಿಗಿಂತ ಹೆಚ್ಚಾಗಿ ನೆರೆ ರಾಜ್ಯದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಅವರಿಗೆ ಹೆಚ್ಚಿನ ಹುದ್ದೆಗಳನ್ನು ನೀಡಲಾಗಿದೆ.
ಎನ್‍ಎಂಡಿಸಿ 160 ಹುದ್ದೆಗಳ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ ಕೇವಲ 6 ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ,ಇನ್ನುಳಿದ ಹುದ್ದೆಗಳಿಗೆ ನೆರೆ ರಾಜ್ಯದವರನ್ನೇ ನೇಮಕ ಮಾಡಿಕೊಳ್ಳಲಾಗಿದೆ.ಈ ಬಗ್ಗೆ ಕನ್ನಡಪರ ಸಂಘಟನೆಗಳು ಸೇರಿದಂತೆ ಸಂಡೂರು ಶಾಸಕ ಇ. ತುಕಾರಾಂ ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ,ನೇಮಕಾತಿ ಪ್ರಕ್ರಿಯಿಗೆ ವಿರೋದ ವ್ಯಕ್ತಪಡಿಸಿದ್ದಾರೆ.ಆದರೂ ಈ ಉದ್ಯಮದಲ್ಲಿ ಉದ್ಯೋಗ ಪಡೆಯುವಲ್ಲಿ ಸ್ಥಳೀಯ ವಿಧ್ಯಾರ್ಥಿಗಳು ಹರ ಸಾಹಸಪಟ್ಟರೂ ವಿಫಲವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.1961 ರಲ್ಲಿ ಸ್ಥಾಪನೆಯಾಗಿರುವ ಎನ್‍ಎಂಡಿಸಿ ಉದ್ಯಮದಲ್ಲಿ 2009 ರವರೆಗೆ ಸ್ಥಳೀಯರಿಗೆ 100 ಕ್ಕೆ 100 ರಷ್ಟು ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ ತದ ನಂತರದ ದಿನಗಳಲ್ಲಿ ಈ ಉದ್ಯಮದಲ್ಲಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
ಎನ್‍ಎಂಡಿಸಿ ಉದ್ಯಮದಲ್ಲಿ ಈಚೆಗೆ ನಡೆದ ಹಲುವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದೆ ಈ ನೇಮಕಾತಿಯಲ್ಲಿ ಹೊರ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆಯೇ ಹೆಚ್ಚು ನಡೆದಿರುವುದರಿಂದ ಇದರಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಸಚಿವರು ಮತ್ತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಸ್ಥಳೀಯರಿಗೆ ನ್ಯಾಯ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅಧ್ಯಕ್ಷರು ಕರವೇ ಸಂಡೂರು
ಸಚಿವರ ಭೇಟಿ
ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆದ ನಂತರ ಎಎಂಡಿಸಿ ಕಂಪನಿಗೆ ಗಣಿ ಮತ್ತು ಭು ವಿಜ್ಞಾನ ಹಾಗೂ ಮುಜರಾಯಿ ಖಾತೆ ಸಚಿವ ರಾಜಶೇಖರ ಗೌಡ ಬಿ. ಪಾಟೀಲ್ ಭೇಟಿ ನೀಡಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ ನಂಜುಂಡಪ್ಪ ವರದಿ ಮತ್ತು ಹೈ ಕ ಭಾಗದ ಜನರು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಂಪನಿಯು ಕಲ್ಪಿಸಬೇಕಾಗುತ್ತದೆ. ಆದರೆ ನೇಮಕಾತಿಯಲ್ಲಿ ಆಗಿರುವಂತಹ ವ್ಯತ್ಯಾಸಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿ ಹೋದವರು ಮತ್ತೆ ಎಲ್ಲೂ ಈ ಬಗ್ಗೆ ತುಟಿ ಬಿಚ್ಚಲಿಲ್ಲ ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಅನ್ಯಾಯವಾಗಿದೆಯೇ ಹೊರತು ಯಾವ ಮಂತ್ರಿಗಳಿಗೂ ಅಲ್ಲ.
ಸ್ಥಳೀಯರಿಗೆ ವಿದ್ಯಾರ್ಥಿಗಳಿಗರ ಆಗುತ್ತಿರುವ ಅನ್ಯಾಯದ ಬಗ್ಗೆ ಬಳ್ಳಾರಿ ಜಿಲ್ಲೆಯಲ್ಲಿರುವ ಜನ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹ ಮುಂಜಾಗ್ರತವಾಗಿ ಎಚ್ಚೆತ್ತುಕೊಳ್ಳಬೇಕು. ಅನ್ಯಾಯಕ್ಕೊಳಗಾಗುತ್ತಿರುವುದು ನಮ್ಮ ಸ್ಥಳಿಯ ವಿದ್ಯಾರ್ಥಿಗಳೇ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಒಳಿತು.
ಕೈ ಕಟ್ಟಿ ಕುಳಿತರು
ಎನ್‍ಎಂ ಡಿ ಸಿ ಉದ್ಯಮದಲ್ಲಿ 160 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕಿಯೆ ಆರಂಭದ ದಿನಗಳಲ್ಲಿ ಎನ್‍ಎಂಡಿಸಿ ಯಲ್ಲಿರುವ ಕಾರ್ಮಿಕ ಸಂಘಟನೆಗಳು ಕನ್ನಡಪರ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಮುಂಜಾಗ್ರತವಾಗಿ ಮನವಿ ಸಲ್ಲಿಸಬೇಕಿತ್ತು ಆದರೆ ಎಲ್ಲಾ ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ನಿದ್ದೆಯಿಂದ ಎದ್ದು ಮನವಿ ಮಾಡಿ ನೇಮಕಾತಿ ಪ್ರಕ್ರಿಯೆಗೆ ವಿರೋದ ವ್ಯಕ್ತಪಡಿಸಿವೆ. ಆದರೆ ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಏನು ಫಲ ಎಂಬಂತಾಗಿದೆ.