ಎಲ್ಲ 23 ಕ್ಷೇತ್ರಗಳನ್ನು ಕಾಂಗ್ರೇಸ್ ಗೆಲ್ಲುವ ನಿರೀಕ್ಷೆ

ಹಾನಗಲ್ಲ :

             ಹಾನಗಲ್ಲ ಪುರಸಭೆಯಲ್ಲಿ ಎಲ್ಲ 23 ಕ್ಷೇತ್ರಗಳನ್ನು ಕಾಂಗ್ರೇಸ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದ್ದು ನಗರದ ಸ್ವಚ್ಛತೆ, ಬೀದಿ ವ್ಯಾಪಾರಿಗಳು, ಕೊಳಚೆ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂಧಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಿಳಿಸಿದರು.
              ಹಾನಗಲ್ಲಿನಲ್ಲಿ ಪುರಸಭೆ ಚುನಾವಣೆಗಾಗಿ ನಗರದ ಮನೆ ಮನೆಗಳಿಗೆ ತೆರಳಿ ಕಾಂಗ್ರೇಸ್ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಅವರು, 10 ವರ್ಷ ಹಾನಗಲ್ಲ ಪುರಸಭೆ ಆಡಳಿತ ನಡೆಸಿದ ಬಿಜೆಪಿ ಜನಸಾಮಾನ್ಯರನ್ನು ತಲುಪಲು ಆಗದೆ, ನಗರದ ಸ್ವಚ್ಛತೆಗೂ ಗಮನ ಹರಿಸದೆ, ಕೇವಲ ಸ್ವಹಿತಾಸಕ್ತಿಗಾಗಿಯೇ ಕಾಲ ಕಳೆದರು. ಪಟ್ಟಣಕ್ಕೆ ಮೂಲಭೂ ಸೌಕರ್ಯ ಒದಗಿಸಲಾಗದ ಬಿಜೆಪಿ ಆಡಳಿತವನ್ನು ಈ ಬಾರಿ ಜನತೆ ತಿರಸ್ಕರಿಸಲಿದೆ ಎಂದರು.
               ಹಾನಗಲ್ಲಿಗೆ ಮುಖ್ಯವಾಗಿ ಒಳಚರಂಡಿ ವ್ಯವಸ್ಥೆ ಬೇಕಾಗಿದೆ. ನೈರ್ಮಲ್ಯವೇ ಪುರಸಭೆಗಳ ಮೊದಲ ಆದ್ಯತೆಯ ಕೆಲಸವಾಗಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಕೊಳಗೇರಿಗಳ ಅಭಿವೃದ್ಧಿ ಆದ್ಯತೆ ನೀಡಿಲ್ಲ ಎಂಬುದು ಈಗ ಎಲ್ಲರ ಗಮನಕ್ಕೆ ಬಂದಿದೆ. ಕೊಳಗೇರಿ ನಿವಾಸಿಗಳಿಗೆ ಪರಿಚಯ ಪತ್ರ ನೀಡಿಲ್ಲ. ಕ್ರಿಯಾ ಪತ್ರಗಳನ್ನೂ ನೀಡಿಲ್ಲ. ಬೀದಿ ವ್ಯಾಪರಿಗಳಂತೂ ಹೆಚ್ಚು ಆತಂಕದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದೇ ನಮ್ಮ ಆದ್ಯತೆ. ಈ ಬಾರಿ ಹಾನಗಲ್ಲ ನಗರದ ಎಲ್ಲ 23 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲ್ಲುವ ಮೂಲಕ ಹೊಸ ಇತಹಾಸ ಬರೆಯಲಿದೆ. ಜನಪರ ಆಡಳಿತ ನೀಡುವ ಭರವಸೆಯನ್ನು ಮತದಾರರು ಹೊಂದಿದ್ದಾರೆ. ಎಲ್ಲ 23 ವಾರ್ಡಗಳಲ್ಲಿಯೂ ಪ್ರಚಾರಕ್ಕೆ ತೆರಳಿದಾಗ ಇಲ್ಲಿನ ಜನತೆ ತಮ್ಮ ಅಹವಾಲು ತೋಡಿಕೊಂಡಿದ್ದಾರೆ. ನಾವು ಹಾನಗಲ್ಲ ಪುರಸಭೆ ಆಡಳಿತಕ್ಕೆ ಬರುವುದು ಖಚಿತ. ಜನರ ಸಮಸ್ಯೆ ನಿವಾರಿಸುತ್ತೇವೆ ಎಂದರು.
            ಈ ಸಂದರ್ಭದಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ, ಎ.ಎಂ.ಪಠಾಣ, ಶಿವಬಸಪ್ಪ ಪೂಜಾರ, ಬಿ.ಶಿವಪ್ಪ, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಆರ್.ಎಸ್.ಪಾಟೀಲ, ಎಂ.ಕೆ.ಹುಬ್ಬಳ್ಳಿ, ನಾಗಪ್ಪ ಸವದತ್ತಿ ಮೊದಲಾದವರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link