ಜಕಾರ್ತಾ :
ಇಂಡೋನೇಶ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷಿಯನ್ ಗೇಮ್ಸ್ 2018ರಲ್ಲಿ ಭಾರತದ ಪದಕ ಭೇಟಿ ಮುಂದುವರೆದಿದೆ. ಇಂದು ಮಹಿಳೆಯರ ಟೆನಿಸ್ ಸಿಂಗಲ್ಸ್‌ನಲ್ಲಿ ಭಾರತ ಕಂಚು ಗೆದ್ದಿದೆ.
ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಝಾಂಗ್ ಶುಯಿ ವಿರುದ್ಧ 4-6, 6-7(6) ಅಂತರದಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಏಷ್ಯನ್ ಗೇಮ್ನ ಮಹಿಳಾ ಟೆನ್ನಿಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ 2006ರಲ್ಲಿ ಬೆಳ್ಳಿ ಹಾಗೂ 2010ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಸಾನಿಯಾ ಮಿರ್ಜಾರನ್ನು ಹೊರತು ಪಡಿಸಿದರೆ ಏಷ್ಯನ್ ಗೇಮ್ಸ್ನ ಸಿಂಗ್ಲ್ಸ್ ಟೆನ್ನಿಸ್ ವಿಬಾಗದಲ್ಲಿ ಪದಕ ಪಡೆದ ಎರಡನೇ ಆಟಗಾರ್ತಿ ಕೀರ್ತಿಗೆ ಅಂಕಿತಾ ಭಾಜನರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ