ಜಕಾರ್ತಾ:
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಗುರಿಕಾರರ ಪದಕ ಬೇಟೆ ಮುಂದುವರೆದಿದ್ದು, ಶೂಟರ್ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಸಂಜೀವ್ ಅವರ ಪದಕದಿಂದ ಭಾರತದ ಒಟ್ಟು ಪದಕದ ಗಳಿಕೆ 8ಕ್ಕೆ ಏರಿದೆ.
ಪುರುಷರ 50 ಮೀಟರ್ 3 ಪೊಸಿಷನ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾಗವಹಿಸಿದ್ದ ಸಂಜೀವ್ ಅವರು ಕೇವಲ 0.4 ಮಿಮೀ ಅಂತರದಲ್ಲಿ ಚಿನ್ನದ ಪದಕ ವಂಚಿತರಾಗಿದ್ದಾರೆ.
ಚಿನ್ನ ಗೆದ್ದ ಚೀನಾದ ಹೂಯಿ ಝಿಚೆಂಗ್ 453.3 ಅಂಕ ಗಳಿಸಿದ್ದರು. ಇನ್ನು ಕಂಚು ವಿಜೇತ ಜಪಾನ್‌ನ ಮಟ್ಸುಮೊಟೊ ತಕಯೂಕಿ 441.4 ಅಂಕಗಳನ್ನು ಕಲೆ ಹಾಕಿದ್ದರು.
![](https://prajapragathi.com/wp-content/uploads/2018/08/21_08_2018-sanjeev_asian_si.gif)