ಇಂಡೋನೇಷ್ಯಾ:
ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ಲಭಿಸಿದೆ.
ಬುಧವಾರ (ಆಗಸ್ಟ್ 22) ನಡೆದ ಶೂಟಿಂಗ್ ನ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿ ಭಾರತಕ್ಕೆ ಚಿನ್ನ ಜಯಿಸಿದರು. ಇದರೊಂದಿಗೆ ಭಾರತದ ಪದಕ ಖಾತೆಗೆ ಒಟ್ಟು 11 ಪದಕಗಳು ಸೇರ್ಪಡೆಗೊಂಡಿವೆ. ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ.
ಮಹಿಳಾ ವಿಭಾಗದ 25 ಮೀಟರ್ ಪಿಸ್ತೂಲ್ನಲ್ಲಿ ಸರ್ನೋಬತ್ ಚಿನ್ನ ಗೆದ್ದರು. ಈ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದೆ.
593 ಅಂಕಗಳನ್ನು ಸಂಪಾದಿಸುವ ಮೂಲಕ ರಾಹಿ ಮೊದಲ ಸ್ಥಾನ ಪಡೆದರು. ಎಲ್ಲಾ ಹಂತದಲ್ಲೂ ಒತ್ತಡ ರಹಿತವಾಗಿ ಗುರಿ ಇಟ್ಟಿದ್ದ ರಾಹಿ ಸರ್ನೋಬತ್ ಅವರ ವಿಶೇಷವಾಗಿತ್ತು.