ಪಲೆಂಬಂಗ್:
ಏಷ್ಯನ್ ಗೇಮ್ಸ್ 2018ರ ಮಹಿಳೆಯರ 10 ಮೀಟರ್ ರೈಫಲ್ ಅಂತಿಮ ಪಂದ್ಯದಲ್ಲಿ ಭಾರತದ ಅನುಭವಿ ಶೂಟರ್ ಹೀನಾ ಸಿಧು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.
ಹೀನಾ ಸಿಧು ಅರ್ಹತಾ ಸುತ್ತಿನಲ್ಲಿ 13 ಮತ್ತು 17ನೇ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದರೂ ಕೂಡ ಅಂತಿಮ ಸುತ್ತಿನಲ್ಲಿ 219.3 ಮೂಲಕ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಇವರು ಮತ್ತು ಚಿನ್ನ ಗೆದ್ದವರ ಮಧ್ಯೆ ಇದ್ದ ಅಂತರ ಕೇವಲ 0.1 ಮಾತ್ರ.
ಕಾಮನ್ ವೆಲ್ತ್ ನಲ್ಲಿ ಚಿನ್ನ ಗಳಿಸಿದ್ದ 16 ವರ್ಷದ ಮನು ಭಕೆರ್ 176.2 ಅಂಕ ಗಳಿಸುವ ಮೂಲಕ 5 ನೇ ಸ್ಥಾನಕ್ಕೆ ಜಾರಿದರು