ಹಾವೇರಿ:
ಒಂದನೇ ವಾರ್ಡಿನಲ್ಲಿ ಬಡ ಕೂಲಿ ಕಾರ್ಮಿಕರು, ಮಾಧ್ಯಮ ವರ್ಗ ಹಾಗೂ ಬುದ್ಧಿವಂತ ಮತದಾರರು ಇದ್ದು, ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಅಭಿವೃದ್ಧಿಯಲ್ಲಿ ನಂ 1 ಮಾಡುವುದೇ ನನ್ನ ಉದ್ದೇಶ ಎಂದು ಪಕ್ಷೇತರ ಅಭ್ಯರ್ಥಿ ಶ್ರೀಕಾಂತ ಪೂಜಾರ ಹೇಳಿದರು. ನಗರಸಭೆಯ ಚುನಾವಣೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿ ತೊಡಗಿಕೊಂಡು ಮೆನೆ ಮನೆಗೆ ಭೇಟಿ ಸಂದರ್ಭದಲ್ಲಿ ಅವರ ತಮ್ಮ ಅಭಿಪ್ರಾಯವನ್ನು ತಿಳಿಸಿದರು. 1 ನೇ ವಾರ್ಡಿನ ಎಸ್‍ಟಿ ಮಿಸಲು ಕ್ಷೇತ್ರವಾಗಿದ್ದು 1ನೇ ವಾರ್ಡಿನ ಜನರು ಅಭಿಮಾನದಿಂದ ಪಕ್ಷೇತರವಾಗಿ ಚುನಾವಣೆ ಎದುರಿಸಲು ಪ್ರೇರೆಪಿಸಿದ್ದು, ಸವಾಲಾಗಿ ಸ್ವೀಕರಿಸಿದ್ದೇನೆ. ಜನರಿಗೆ ಸರ್ಕಾರ ಸೌಲಭ್ಯದ ಅವಶ್ಯಕವಾಗಿ ಒದಗಿಸಬೇಕು.
ನಾನು ವಿಧ್ಯಾವಂತನಾಗಿದ್ದು, ಈ ವಾರ್ಡಿನ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇದೆ. ವಾರ್ಡಿನ ಯುವಕರಿಗೆ, ಮಹಿಳೆಯರಿಗೆ ಹಾಗೂ ಹಿರಿಯರಿಗೆ ಸೂಕ್ತ ಸರ್ಕಾರಿ ಸೌಲಭ್ಯ ಒದಗಿಸುವುದೇ ನನ್ನ ಗುರಿಯಾಗಿದೆ. ಕುಡಿಯುವ ನೀರಿನ ವ್ಯವಸ್ಥೆ. ಸುಸರ್ಜಿತವಾದ ರಸ್ತೆಗಳು.ಗುಣಮಟ್ಟದ ಚರಂಡಿ ಮೂಲಭೂತ ಸೌಲಭ್ಯ ಒದಗಿಸಲು ಬದ್ದನಾಗಿದ್ದೇನೆ. ಎಲ್ಲರ ಅಪೇಕ್ಷೆಯ ಮೇರಿಗೆ ನಾನು ಹಗಲಿರುಳು ಕೆಲಸ ಮಾಡಲು ಸಿದ್ದನಿದ್ದೇನೆ. ವಾರ್ಡನ ಜನರು ನನ್ನ ಚಿಹ್ನೆಯಾದ ದೂರದರ್ಶನ(ಟಿವಿ) ಗುರುತಿಗೆ ಮತ ಹಾಕುವ ಮೂಲಕ ನನಗೆ ಆರ್ಶಿವಾದ ಮಾಡಿರಿ. ತಮ್ಮ ಸೇವೆ ಮಾಡು ಅವಕಾಶವೆಂದು ಭಾವಿಸುತ್ತೇನೆ. ವಾರ್ಡಿನ ಎಲ್ಲ ಸಮಸ್ಯೆಗಳಿಗೂ ನ್ಯಾಯಯುತವಾಗಿ ಶ್ರಮವಹಿಸಿ ದುಡಿಯುತ್ತೇನೆ. ವಾರ್ಡಿನ ಅಭಿವೃದ್ಧಿಗೆ ನಾನು ಮತ ಕೇಳುತ್ತಿದ್ದು ಮತದಾರ ಪ್ರಭುಗಳು ನನ್ನ ಗುರುತಾದ ದೂರದರ್ಶನ (ಟಿವಿ) ಮತ ನೀಡಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ವಾರ್ಡಿನ ಮುಖಂಡರು ವಕೀಲರಾದ ರವಿ ಕಬಾಡಿ ಮಾತನಾಡಿ ಶ್ರೀಕಾಂತ ಪೂಜಾರ ಒಬ್ಬ ಸಮರ್ಥ ಹಾಗೂ ಜನರ ಬಗ್ಗೆ ಕಾಳಜಿ ಇರುವ ವ್ಯಕ್ತಿ.
ವಾರ್ಡಿನ ಜನರು ಅವರ ಒಳ್ಳೆಯ ಅಭ್ಯರ್ಥಿ ಎಂದು ಗುರುತಿಸಿ ಶ್ರೀಕಾಂತ ಪೂಜಾರ ಅವರನ್ನು ಬೆಂಬಲಿಸಿ ಗೆಲುವಿಗೆ ಶ್ರಮವಹಿಸುತ್ತಿದ್ದೇವೆ. ವಾರ್ಡಿನ ಸರ್ವಾಂಗಣ ಅಭಿವೃದ್ಧಿ ಆಗಬೇಕಾದರೆ ಶ್ರೀಕಾಂತ ಪೂಜಾರ ಜಯಶಾಲಿಯಾಗಬೇಕಾಗಿದೆ. ಮತದಾರರು ಟಿವಿ ಗುರುತಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ವಾರ್ಡಿನ ಅಭಿವೃದ್ಧಿಯೇ ಮುಖ್ಯ ಗುರಿಯಾಗಲಿದೆ ಎಂದು ಹೇಳಿದರು. ಪ್ರಚಾರದಲ್ಲಿ ವಕೀಲರಾದ ಉಮರ್ ರಜಾಕನವರ.ನಜೀರ್ ಗದಗ.ಎಫ್ ಡಿ ಮಾಳಗಿ.ಶಂಕರಗೌಡ್ರ ಕರಬಸನಗೌಡ್ರ.ತಿಮ್ಮಣ್ಣ ಬಂಡಿವಡ್ಡರ.ಶ್ರೀಮತಿ ಜಾನಕಿ ಪೂಜಾರ.ವನಜಾಕ್ಷಿ ಆರಾಧ್ಯಮಠ.ರಾಜೇಸಾಬ ಶಾಬಾಯಿ.ರಿಯಾಜ್.ನೂರಹ್ಮದ್ ನದಾಫ್.ಅಬ್ದುಲ್ ನದಾಫ್ ಸೇರಿದಂತೆ ಬೆಂಬಲಿಗರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
