ಒಂದು ಲಕ್ಷ ರೂ ತನಕ ಮನ್ನಾ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್

ಬೆಂಗಳೂರು

ರಾಜ್ಯಾದ್ಯಂತ ರೈತರ ಮನೆಗಳಲ್ಲಿ ಎಷ್ಟೇ ಜನ ಕೃಷಿ ಸಾಲ ಮಾಡಿದ್ದರೂ ಒಂದು ಲಕ್ಷ ರೂ ತನಕ ಮನ್ನಾ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ದಿವಂಗತ ದೇವರಾಜ ಅರಸರ ನೂರಾ ಮೂರನೇ ಜನ್ಮ ಜಯಂತಿಯ ಅಂಗವಾಗಿ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಈ ವಿಷಯ ಪ್ರಕಟಿಸಿದರು.

ಇತ್ತೀಚೆಗೆ ಸರ್ಕಾರ ಹೊರಡಿಸಿದ ಆದೇಶದಲ್ಲಿ ರೈತರ ಕುಟುಂಬದ ಓರ್ವರು ಮಾಡಿದ ಒಂದು ಲಕ್ಷ ರೂಗಳವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರಿಂದ ಗೊಂದಲ ಉಂಟಾಗಿತ್ತು.ಆದರೆ ರೈತರ ಕುಟುಂಬದಲ್ಲಿ ಎಷ್ಟೇ ಜನ ಕೃಷಿ ಸಾಲ ಮನ್ನಾ ಮಾಡಿದ್ದರೂ ಮನ್ನಾ ಮಾಡುವುದಾಗಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದರು.

ಈ ಹಿನ್ನೆಲೆಯಲ್ಲಿಯೇ ಆದೇಶವನ್ನು ಬದಲಿಸಲಾಗಿದ್ದು ಅದರ ಪ್ರಕಾರ ರೈತರ ಕುಟುಂಬದಲ್ಲಿ ಎಷ್ಟು ಜನ ಸಾಲ ಮಾಡಿದ್ದರೂ ಒಂದು ಲಕ್ಷ ರೂವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದರು.

ಈ ವಿಷಯದಲ್ಲಿ ಯಾವ ಗೊಂದಲವೂ ಬೇಡ.ತಮ್ಮ ಸರ್ಕಾರ ಈಗಾಗಲೇ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಇದೇ ಸಂದರ್ಭದಲ್ಲಿ ವಿವರ ನೀಡಿದರು.

ದೇವರಾಜ ಅರಸರು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಬಣ್ಣಿಸಿದ ಅವರು,ಅರಸರ ಕ್ರಮಗಳಿಂದ ಶೋಷಿತ ಸಮುದಾಯ ಶಕ್ತಿ ಪಡೆಯಿತು ಎಂದು ಹೇಳಿದರು.

ಉಳುವವನೇ ಹೊಲದೊಡೆಯ ಎಂದು ಅರಸರು ಮಾಡಿದ ಕಾಯ್ದೆ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಮಹದೇವು ಅವರು, ದೇವರಾಜ ಅರಸರ ಕೆಲಸವನ್ನು ಮೆಚ್ಚಿ ಇಂದಿರಾಗಾಂಧಿಯವರು ಒಂದು ಸಂದರ್ಭದಲ್ಲಿ ಅರಸರಿಗೆ ಮರ್ಸಿಡಿಸ್ ಬೆಂಜ್ ಕಾರು ನೀಡಿದ್ದರು. ಅರಸರ ನಂತರ ಆ ಕಾರು ಸರ್ಕಾರದ ಬಳಿ ಉಳಿದುಕೊಂಡಿತ್ತು.
ತಾವು ಅದನ್ನು ಹದಿಮೂರು ಲಕ್ಷ ರೂಪಾಯಿಗಳಿಗೆ ಖರೀದಿಸಿ ಈಗ ಸುಸ್ಥಿತಿಯಲ್ಲಿಟ್ಟಿದ್ದೇನೆ. ಸರ್ಕಾರ ಬಯಸಿದರೆ ಅದನ್ನು ಸರ್ಕಾರಕ್ಕೆ ನೀಡಲು ಸಿದ್ಧವಿದ್ದೇನೆ. ಆದರೆ ಸರ್ಕಾರ ಆ ಕಾರನ್ನು ದೇವರಾಜ ಅರಸರ ಸ್ಮರಣೆಗಾಗಿ ಸಂರಕ್ಷಿಸಬೇಕು ಎಂದು ಮನವಿ ಮಾಡಿಕೊಂಡರು

Recent Articles

spot_img

Related Stories

Share via
Copy link