ಹಿರಿಯೂರು:
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ಕನಕಧಾಮ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಯವರು ಶನಿವಾರ ಶ್ರಾವಣಮಾಸದ ಶಿವ ಶಿವ ಗುರುಧರ್ಮ ಕೋರಾಣ್ಯದಲ್ಲಿ ಭಿಕ್ಷೆ ಎಂದು ಹಿರಿಯೂರಿನಲ್ಲಿ ಶ್ರಾವಣಭಿಕ್ಷೆ ಆರಂಭಿಸಿದರು.
ಹಿರಿಯೂರಿನ ಕುರುಬ ಸಮಾಜದ ಮಾಜಿ ಅಧ್ಯಕ್ಷರಾದ ಹೆಚ್.ವೆಂಕಟೇಶ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷರಾದ ಮಂಜುಳಾವೆಂಕಟೇಶ್ ಇವರ ಮನೆಗೆ ಆಗಮಿಸಿದಾಗ ಸ್ವಾಮೀಜಿಯವರಿಗೆ ಪಾದಪೂಜೆಯೊಂದಿಗೆ ಗೌರವ ಆದರಗಳಿಂದ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಈಶ್ವರಾನಂದಪುರಿ ಮಹಾಸ್ವಾಮಿಯವರು ಹಾಲುಮತ ಸಂಸ್ಕೃತಿಯಲ್ಲಿ ಶ್ರಾವಣಮಾಸದಲ್ಲಿ ಗುರುವಿಗೆ ಭಿಕ್ಷೆ ನೀಡುವುದು ವಿಶೇಷವಾಗಿದೆ, ಕಾಣಿಕೆ ಭಿಕ್ಷೆಯನ್ನು ಸ್ವೀಕರಿಸುವುದು ಲೋಕ ಕಲ್ಯಾಣಕ್ಕಾಗಿ ಉತ್ತಮ ಮಳೆಬೆಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ನಡೆಸುವುದು ಹಾಲುಮತದಲ್ಲಿ ಅನಾದಿಕಾಲದಿಂದಲೂ ನಡೆದು ಬಂದಿದೆ. ಅದೇ ರೀತಿ ಪ್ರತೀ ವರ್ಷ ಶ್ರಾವಣಮಾಸದಲ್ಲಿ ಶ್ರಾವಣಭಿಕ್ಷೆ ನಡೆಸುತ್ತಾ ಬಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕುರುಬಸಮಾಜದ ನಿರ್ದೇಶಕರಾದ ಕಂದೀಕೆರೆ ಸುರೇಶ್‍ಬಾಬು, ಕುರುಬ ಸಮಾಜದ ಅಧ್ಯಕ್ಷರಾದ ಬಿ.ಮಹಾಂತೇಶ್, ಮಾಜಿ ಅಧ್ಯಕ್ಷರಾದ ಹೆಚ್.ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಮಂಜುಳಾವೆಂಕಟೇಶ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ನಂದಿಹಳ್ಳಿ ಗಿರಿಜಪ್ಪ ನಿವೃತ್ತ ಎ.ಸಿ. ರೇವಣ್ಣ ಒಡೆಯರ್, ಜಿಲ್ಲಾ ಉಪಾಧ್ಯಕ್ಷರಾದ ಎನ್.ಜೈರಾಂ, ಇಕ್ಕನೂರು ಗೋವಿಂದಪ್ಪ, ಹರ್ತಿಕೋಟೆ ಶ್ರೀನಿವಾಸ್, ರವೀಂದ್ರನಾಥ್, ಪರಮಶಿವ, ನಿಜಲಿಂಗಪ್ಪ, ಗಿರಿದಾಸ್, ರೇಖಾ ಮತ್ತಿತರರು ಉಪಸ್ಥಿತರಿದ್ದರು.