ಕನ್ನಡದಲ್ಲಿ ಮೋಡಿ ಮಾಡಿದ ಪ್ರಧಾನಿ, ದೇಶಕ್ಕೆ ಬೆಂಗಳೂರಿನ ಕೊಡುಗೆ ಅಪಾರ, ಹೈ ಅರ್ಲಟ್ ನಡುವೆಯೂ ಅಪಘಾತ

ಕೊಮ್ಮಘಟ್ಟದಲ್ಲಿ ಪ್ರಧಾನಮಂತ್ರಿಗಳಿಂದ 33 ಸಾವಿರ ಕೋಟಿ ರೂ.ಗಳ ಯೋಜಗಳಿಗೆ ಚಾಲನೆ

ಆತ್ಮನಿರ್ಭರ ಭಾರತ ಕಲ್ಪನೆಗೆ ಬೆಂಗಳೂರು ಆದರ್ಶ

ಬೆಂಗಳೂರು : ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕೊಮ್ಮಘಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಕನ್ನಡದಲ್ಲಿ ಮಾತನಾಡಿದ ಮೋದಿ ಬೆಂಗಳೂರಿಗರನ್ನು ಹಾಡಿ ಹೊಗಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜಧಾನಿಗೆ ಆಗಮಿಸಿದ್ದು, ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ- ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ರೈಲು ಸೇವೆಗಳಿಗೆ ಚಾಲನೆ, ಬೆಂಗಳೂರು ಉಪ ನಗರ ಯೋಜನೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕನ್ನಡದಲ್ಲಿ ಮೋಡಿ ಮಾಡಿದ ಪ್ರಧಾನಿ : ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಇದೇ ವೇಳೆ ಕೊಂಕಣ ರೈಲು ಮಾರ್ಗವೂ ಸಂಪೂರ್ಣ ವಿದ್ಯುದೀಕರಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಉದ್ಘಾಟಿಸಿದರು. ಎಲ್ಲರಿಗೂ ನಮಸ್ಕಾರಗಳು, ಕರ್ನಾಟಕ ರಾಜ್ಯದ ಪಾಲಿಗೆ ಇಂದು ಮಹತ್ವದ ದಿನ. ರಾಜ್ಯದಲ್ಲಿ ಹಲವು ಮೂಲಭೂತ ಸೌಲಭ್ಯಗಳು ಕಲ್ಪಿಸುವ ಯೋಜನೆಗಳಿಗೆ ಇಂದು ಚಾಲನೆ ಸಿಕ್ಕಿದೆ. ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗುತ್ತದೆ. ವೇದಿಕೆಯ ಮೇಲಿರುವ ಎಲ್ಲರಿಗೂ ಆತ್ಮೀಯ ಧನ್ಯವಾದಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ದಿ : ಕರ್ನಾಟಕದ ತ್ವರಿತ ಅಭಿವೃದ್ಧಿಯ ಭರವಸೆ ಡಬಲ್ ಇಂಜಿನ್ ಸರ್ಕಾರ ನೀಡಿತ್ತು. ಆದರ ಭರವಸೆಯನ್ನು ಮತ್ತೊಮ್ಮೆ ನಾವು ಸಾಧಿಸುತ್ತಿದ್ದೇವೆ. 27 ಸಾವಿರ ಕೋಟಿರೂ ಮೌಲ್ಯದ ಅಭಿವೃದ್ಧಿ ಕಾರ್ಯವನ್ನು ಉದ್ಘಾಟಿಸಲಾಗಿದೆ. ಕೊಮ್ಮಘಟ್ಟಕ್ಕೆ ಬರುವ ಮುನ್ನ ನಾನು ಐಐಎ???ಸಿಗೆ ಭೇಟಿ ನೀಡಿದೆ. ವಿಜ್ಞಾನ ತಂತ್ರಜ್ಞಾನದ ಕ್ಷೇತ್ರದಲ್ಲಿನ ಪ್ರಗತಿಯನ್ನು ನೋಡಲು ನನಗೆ ಸಂತಸವಾಗುತ್ತಿದೆ. ಬೆಂಗಳೂರಿನಲ್ಲಿ ಇದು ನನ್ನ ಕಡೆಯ ಕಾರ್ಯಕ್ರಮವಾಗಿ ಇದಾದ ನಂತರ ನಾನು ಮೈಸೂರಿಗೆ ಹೋಗುತ್ತಿದ್ದೇನೆ ಎಂದರು. ಕರ್ನಾಟಕದಲ್ಲಿ ಐದು ನ್ಯಾಷನಲ್ ಹೈವೇ ಮತ್ತು ಏಳು ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಮೈಸೂರಿನಲ್ಲೂ ಕರ್ನಾಟಕದ ಅಭಿವೃದ್ಧಿ ಯಾತ್ರೆ ಮುಂದುವರೆಯುತ್ತದೆ. ಇಲ್ಲಿಂದ ಹೊಸ ಶಕ್ತಿ ಪಡೆದು ಹೊರಡುತ್ತಿದ್ದೇನೆ ಎಂದು ಹೇಳಿದರು.

ಬೆಂಗಳೂರಿನ ಜನರಿಗೆ ಟ್ರಾಫಿಕ್ ಜಾಮ್ ನಿಂದ ಮುಕ್ತಿ : ಬೆಂಗಳೂರು ದೇಶದ ಲಕ್ಷಾಂತರ ಯುವಕರಿಗೆ ಭವಿಷ್ಯದ ಕನಸು ಕಲ್ಪಿಸುವ ನಗರವಾಗಿದೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬರುವ ಸಾವಿರಾರು ಜನರಿಗೆ ಸಹಾಯವಾಗಬೇಕು. ಇಲ್ಲಿನ ಟ್ರಾಫಿಕ್ ಜಾ???ನಿಂದ ಮುಕ್ತಿ ಪಡೆಯಲು ಮೆಟ್ರೊ, ಸಬ್ ಅರ್ಬನ್ ರೈಲು, ಉತ್ತಮ ರಸ್ತೆ ಎಲ್ಲವನ್ನೂ ಡಬಲ್ ಇಂಜಿನ್ ಸರ್ಕಾರ ಮಾಡುತ್ತದೆ. ಇದರಿಂದ ಜನರಿಗೆ ಸಂಚಾರದಲ್ಲಿ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ಭರವಸೆ ನಿಡಿದರು.

16 ವರ್ಷಗಳಿಂದ ಈ ಎಲ್ಲಾ ಯೋಜನೆಗಳು ಫೈಲ್ ನಲ್ಲಿ ಇದ್ದವು. ನಮ್ಮ ಸರ್ಕಾರ ಈ ಯೋಜನೆಗೆ ಕಾಯಕಲ್ಪ ನೀಡಿದೆ. ಇಲ್ಲಿ ದುಡಿದು ಇಲ್ಲೇ ಇರಬೇಕು ಎಂಬ ಅನಿವಾರ್ಯತೆಯನ್ನು ಈ ರೈಲ್ವೆ ಯೋಜನೆಗಳು ಹೋಗಲಾಡಿಸುತ್ತದೆ. ಕನೆಕ್ಟಿವಿಟಿ ನಿರ್ಮಾಣವಾದ ನಂತರ ಜನರ ದೈನಂದಿನ ಬದುಕಿಗೆ ಸಹಕಾರಿಯಾಗಲಿದೆ. 40 ವರ್ಷಗಳಲ್ಲಿ ಎಲ್ಲ ಕೆಲಸಗಳೂ ಕೇವಲ ಚರ್ಚೆಯಲ್ಲೇ ಕಳೆದುಹೋಗಿವೆ. ರೈಲ್ವೆ ಕನೆಕ್ಟಿವಿಟಿ ನಿರ್ಮಾಣ ದೇಶದ ಆರ್ಥಿಕ ಕ್ರಾಂತಿಗೆ ಮುನ್ನುಡಿಯಾಗುತ್ತದೆ. ಕ್ರಾಂತಿಕಾರಕ ಬೆಳವಣಿಗೆಗೆ ಇದು ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.

ಬೆಂಗಳೂರು ದೇಶಕ್ಕೆ ಅಪಾರ ಕೊಡುಗೆ ನಿಡಿದೆ : 1,200 ಕಿಲೋಮೀಟ???ನಷ್ಟು ಉದ್ದ ರೈಲ್ವೆ ಸಂಪರ್ಕ ಕರ್ನಾಟಕದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ವಿಮಾನದಲ್ಲಿ ಕೊಡುತ್ತಿದ್ದ ಸವಲತ್ತುಗಳನ್ನು ರೈಲ್ವೆಯಲ್ಲೂ ಕೊಡುತ್ತಿದ್ದೇವೆ. ಎಲ್ಲಾ ರೈಲ್ವೇ ನಿಲ್ದಾಣಗಳನ್ನೂ ಸ್ಮಾರ್ಟ್ ನಿಲ್ದಾಣಗಳನ್ನಾಗಿ ಮಾಡಲಾಗುವುದು. ವೆಲ್ತ್ ಕ್ರಿಯೇಟರ್ ಮತ್ತು ಜಾಬ್ ಕ್ರಿಯೇಟ???ಗಳ ನಗರ. ದೇಶಕ್ಕೆ ಬೆಂಗಳೂರಿನ ಕೊಡುಗೆ ಅಪಾರ. ಖಾಸಗಿ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಬೆಂಗಳೂರಿನ ಜನ ತಕ್ಕ ಉತ್ತರ ಕೊಡುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಸಮ್ಮಿಲನವೇ ಬೆಂಗಳೂರು ಬೆಳವಣಿಗೆಗೆ ಕಾರಣ. ಬೆಂಗಳೂರು ಪ್ರತಿಯೊಬ್ಬರ ಮೈಂ???ಸೆಟ್ ಬದಲಾಯಿಸುವ ಅವಕಾಶ ಮಾಡಿಕೊಡುತ್ತದೆ. ಖಾಸಗಿ ಕ್ಷೇತ್ರದ ಬಗ್ಗೆ ತಪ್ಪು ಕಲ್ಪನೆ ಹೊಂದಿದವರ ಮೈಂಡ್ ಸೆಟ್ ಬದಲಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿನ್ನೆಲೆ ಮೋದಿ ಓಡಾಡೋ ರಸ್ತೆ ರಸ್ತೆಯಲ್ಲೂ ಖಾಕಿ ಕಣ್ಗಾವಲು ಹಾಕಲಾಗಿದ್ದು, 10 ಸಾವಿರಕ್ಕೂ ಅಧಿಕ ಪೆÇಲೀಸ್ ಭದ್ರತೆಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿತ್ತು ಇನ್ನ ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಪೆÇಲೀಸ್ ಆಯುಕ್ತರು. 12 ಡಿಸಿಪಿಗಳು, 30 ಎಸಿಪಿಗಳು, 80 ಇನ್ಸ್ ಪೆಕ್ಟ???ಗಳು. ಸೇರಿದಂತೆ ಕೆಎಸ್ ಆರ್ ಪಿ, ಸಿ ಎಆರ್ ಪಡೆ, ಗರುಡ ಪಡೆ ಗಳನ್ನ ನಿಯೋಜಿಸಿದ್ದರು. ಬೆಳಗ್ಗೆ 11:15 ಕ್ಕೆ ಯಲಹಂಕ ವಾಯು ನೆಲೆಗೆ ಬಂದರು. ಮೊದಲಿಗೆ ಮಲ್ಲೇಶ್ವರಂ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ಬೇಟಿ ಮಾಡಿದರು. ನಂತರ ಜ್ಞಾನ ಭಾರತಿಯ ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ ಕಾರ್ಯಕ್ರಮ ಹೀಗೆ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಭಾಗವಹಿಸಿದರು.

ಮೋದಿ ಬೇಟಿ ಬೆನ್ನಲ್ಲೆ ಕೆಲವು ಕಡೆ ಸಂಚಾರ  ನಿಷೇಧಿಸಲಾಗಿತ್ತು? ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿಬರ್‍ಂಧವನ್ನು ಬೆಳಿಗ್ಗೆ 9 ರಿಂದ 6 ಗಂಟೆಯವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣದ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯಿಂದ 3:30 ರವರೆಗೆ ಕೊಮ್ಮಘಟ್ಟ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನ ನಿಬರ್‍ಂಧಿಸಲಾಗಿದೆ.

ಟ್ರಾಫಿಕ್ ಜಾಮ್ : ವಾರದ ಮೊದಲ ದಿನವಾದ್ದರಿಮದ ಸಹಜವಾಗಿ ಟ್ರಾಫಿಕ್ ಹೆಚ್ಚಾಗಿರುತ್ತದೆ. ಇದರ ಮದ್ಯೆ ಬಿಜೆಪಿ ಕಾರ್ಯಕರ್ತರು ಮೋದಿ ಸ್ವಾಗತಿಸಲು ರಸ್ತೆಗಿಳಿದಿದ್ದರಿಮದ ಮತ್ತಷ್ಟು ಟ್ರಾಫಿಕ್ ಕಿರಿಕಿರಯನ್ನು ಸಾರ್ವಜನಿಕರು ಎದುರಿಸಬೇಕಾಯಿತು. ಪೆÇಲೀಸರು ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಿದ್ದರೂ ಅಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು, ಮೇಕ್ರಿ ವೃತ್ತ, ಕಾವೇರಿ ಜಂಕ್ಷನ್ ಸೇರಿದಂತೆ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಪ್ರಧಾನಿ ಕಾರ್ಯಕ್ರಮದಲ್ಲಿ ಕೇಸರಿ ಹವಾ : ಕೊಮ್ಮಘಟ್ಟದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಕಾರ್ಯಕರ್ತರು ಕೇಸರಿ ಸಾಲು ಧರಿಸಿ ಬಂದ್ದರು, ಕಾರ್ಯಕ್ರಮದ ಎಲ್ಲೆಲ್ಲೂ ಕೇಸರಿ ಶಾಲುಗಳೇ ಸದ್ದು ಮಾಡುತ್ತಿತ್ತು.

ಸಿಎಂ ಕಾರು ತಾತ್ಕಾಲಿಕ ಬದಲಾವಣೆ : ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರು ಬದಲಾವಣೆ ಮಾಡಿದ್ದಾರೆ, ಯಾವಗಲೂ ಬಳಸುತ್ತಿದ್ದ ಕಾರಿನ ನಂಬರ್ 9000 , ಇನೋವಾ ಕ್ರಿಸ್ಟ ಇದನ್ನು ಬದಲಾವಣೆ ಮಾಡಿ 4545 ನಂಬರ್ ನ ಫಾರ್ಚೂನರ್ ಕಾರು ಬಳಸಿದ್ದಾರೆ. ಪ್ರಧಾನಿ ಕಾನ್ವೆಯಲ್ಲಿ ದಿನ ಬಳಸುತ್ತಿದ್ದ 9000 ಕಾರು ಇತ್ತು, ನಂತರ 4545 ಕಾರು ಯಲಹಂಕ ಏರ್ ಫೆÇ?ರ್ಸ್ ಗೆ ತೆರಳಿ ಅಲ್ಲಿಂದ ಪ್ರಧಾನಿ ಕಾನ್ವೆಗೆ ಸೇರಿಕೊಳ್ಳುತ್ತದೆ.

ಹೈ ಅರ್ಲಟ್ ನಡುವೆಯೂ ಅಪಘಾತ : ರಾಜ್ಯಕ್ಕೆ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ, ಮೇಖ್ರೀ ವೃತ್ತದಲ್ಲಿ ಟ್ರಾಫಿಕ್ ಬೇಗ ಕ್ಲಿಯರ್ ಮಾಡುವಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಸುಮಾರು ಎರಡು ವರ್ಷದ ಮಗುವಿನ ತಲೆ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಗಾಯವಾಗಿದ್ದು ಸ್ಥಳಿಯ ಆಸ್ಪತ್ರೆಗೆ ಪೆÇಲೀಸರು ರವಾನಿಸಿದ್ದಾರೆ.


ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ
ಇವೆಲ್ಲ ಯೋಜನೆಗಳಿಗೆ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಕಾರಣ. ಈ ದೇಶವನ್ನು ಮೋದಿಯವರು ಆಳುತ್ತಿರುವ ಸಂದರ್ಭದಲ್ಲಿ ಅವರ ದೂರದೃಷ್ಟಿಯಿಂದ ಈ ಯೋಜನೆಗಳೂ ಕೇಂದ್ರ ಸರ್ಕಾರದ ನೆರವಿನ ಸಹಾಯಹಸ್ತದಿಂದ ಜಾರಿಯಾಗಿವೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ದೇಶಕ್ಕೆ 75 ವರ್ಷ ಬಂದಾಗ ಅಮೃತಮಹೋತ್ಸವಕ್ಕೆ ಒಂದು ಹೊಸ ಶಕ್ತಿ ತುಂಬಿದ್ದಾರೆ. 2047 ರ ಸಂದರ್ಭದಲ್ಲಿ ಅವರು ಅಮೃತ ಕಾಲವನ್ನು ಘೋಷಿಸಿ, ವಿವಿಧ ಯೋಜನೆಗಳನ್ನು ರೂಪಸಿದ್ದಾರೆ. 2047 ರ ವೇಳೆಗೆ ಭಾರತ ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ, ನಂಬರ್ ಒನ್ ರಾಷ್ಟ್ರವಾಗುವ ನಿಟ್ಟಿನಲ್ಲಿ ಚಿಂತನೆಯಲ್ಲ, ಕಾರ್ಯಸೂಚಿ, ದಿಕ್ಸೂಚಿ ಹಾಗೂ ಗತಿಶಕ್ತಿಯನ್ನು ನೀಡಿದ್ದಾರೆ. ದೇಶವನ್ನು ಮುನ್ನಡೆಸುವ ಮೋದಿಯವರ ಮಾರ್ಗಸೂಚಿಯ ಪ್ರಕಾರ ಕರ್ನಾಟಕ ಇಂದು ಮುಂದುವರೆದಿದೆ. ಅವರದ್ದು ಕೇವಲ ದೊಡ್ಡ ಯೋಜನೆಗಳಲ್ಲ, ಮಾನವ ಸಂಪನ್ಮೂಲವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಸ್ವಚ್ಛ ಭಾರತ, ಆಯುಷಮಾನ್ ಯೋಜನೆ, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳನ್ನು ರೂಪಿಸಿದ್ದಾರೆ. ವಿರೋಧ ಪಕ್ಷದವರು ಈ ಎಲ್ಲಾ ಯೋಜನೆಗಳ ಪ್ರಯೋಜನವೇನೆಂದು ಕೇಳುತ್ತಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ರಾಜ್ಯದ 53.83 ಲಕ್ಷ ರೈತರು ಪಡೆದಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 34 ಲಕ್ಷ ಮನೆಗಳಿಗೆ ವಿದ್ಯುದೀಕರಣ ಮಾಡಲಾಗಿದೆ. ಜಲ್ ಜೀವನ್ ಯೋಜನೆಯಡಿ 43 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ. ನರೇಂದ್ರ ಮೋದಿಯವರು ಸಂಕಲ್ಪ ಮಾಡಿ ಗ್ರಾಮೀಣ ಮನೆಗಳಿಗೆ ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Recent Articles

spot_img

Related Stories

Share via
Copy link
Powered by Social Snap