ಅಯೋಧ್ಯೆ
ನಾವು ಬಿಜೆಪಿಯಂದಿಗಿನ ಮೈತ್ರಿಯನಷ್ಟೇ ತೊರೆದಿದ್ದೇವೆ ಹಿಂದುತ್ವವನ್ನಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.ಮುಖ್ಯಮಂತ್ರಿಯಾದ ನೂರು ದಿನಗಳ ನಂತರ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಪಡೆದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸ್ವಲ್ಪ ಖಾರವಾಗಿಯೇ ಉತ್ತರಿಸಿದರು.
ನಾವು ಮತ್ತು ನಮ್ಮ ಪಕ್ಷ ಎಂದಿಗೂ ಎಂದೆಂದಿಗೂ ಹಿಂದೂ ಪರವಾಗಿಯೇ ಇರುತ್ತೇವೆ ಮತ್ತು ಇರುತ್ತದೆ ಇದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲಾ,ಮತ್ತು ನಮ್ಮೆಲ್ಲರ ಆರಾಧ್ಯ ದೈವ ರಾಮನ ಮಂದಿರ ನಿರ್ಮಾಣಕ್ಕಾಗಿ 1 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ನಾವು ಮಹಾರಾಷ್ಟ್ರದ ಹಿತಕ್ಕಾಗಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇರುವ ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿರಬಹುದು. ಆದರೆ, ಹಿಂದುತ್ವವನ್ನು ನಾವು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದ್ದಾರೆ.ಬಿಜೆಪಿ ಎಂದರೆ ಹಿಂದುತ್ವ ಅಲ್ಲ. ಬಿಜೆಪಿ ಒಂದೇ ಹಿಂದೂತ್ವ ಪ್ರತಿನಿಧಿಸುವುದಿಲ್ಲ. ಹಿಂದುತ್ವಕ್ಕಾಗಿ ಶಿವಸೇನೆಯೂ ಇದೆ. ಇದ್ದೆ ಇರುತ್ತದೆ ಎಂದು ಅವರು ಹೇಳಿದ್ದಾರೆ.
