ಬೆಂಗಳೂರು :
ಬೆಂಗಳೂರು ವಾಯುವಿಹಾರಕ್ಕೆ ಪ್ರಸಿದ್ದವಾದ ಕಬ್ಬನ್ ಪಾರ್ಕ್ನಲ್ಲಿ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ. ಈ ಹಿನ್ನಲೆ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ಯುವತಿ 18 ವರ್ಷದ ಸಂತೋಷಿ ಎಂದು ಗುರುತಿಸಲಾಗಿದ್ದು. ನಿನ್ನೆ ಸಂಜೆ ಪಾರ್ಕ್ಗೆ ಬಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂದಿನಂತೆ ಬೆಳಗ್ಗೆ ಕೆಲಸಕ್ಕೆಂದು ಬಂದ ಉದ್ಯಾನವನದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ, ಕಬ್ಬನ್ ಪಾರ್ಕ್ ಪೊಲೀಸ ಠಾಣೆಗೆ ಮಾಹಿತಿ ರವಾನೆ ಮಾಡಿದ್ದಾರೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
