ಬೆಂಗಳೂರು :
ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ್ ದಿಢೀರ್ ಸುದ್ದಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಶ್ವತ್ಥ ನಾರಾಯಣ್ ಮಾತನಾಡಿ ಡಿಕೆಶಿ ಭ್ರಷ್ಟಾಚಾರ ಮಾಡಿ ಜೀವನದಲ್ಲಿ ಮುಂದೆ ಬಂದವನು.ಡಿಕೆಶಿ ಷಡ್ಯಂತ್ರ ಏನ್ ಹುನ್ನಾರ ಮಾಡಿದ್ದಾರೆ ಅನ್ನೋದು ಎಲ್ಲಾ ಗೊತ್ತಿದೆ. ಸಚಿವ ಅಶ್ವತ್ಥ್ ನಾರಾಯಣ್ ಕೆಂಡಾಮಂಡಲವಾಗಿದ್ದಾರೆ.
ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಉಗ್ರಪ್ಪ ಮಾಡಿರೋ ಆರೋಪದಲ್ಲಿ ಸತ್ಯವಿಲ್ಲ. ನನ್ನ ಮೇಲಿನ ಆರೋಪಗಳು ಸುಳ್ಳು ಇದು ಸಂಪೂರ್ಣ ನಿರಾಧಾರವಾದದ್ದು, ನಮ್ಮ ಕುಟುಂಬ ಡಿಕೆಶಿ ತರ ಅಲ್ಲ ತಪ್ಪು ಮಾಡಿದ್ರೆ ಕ್ಷಮೆಯ ಪ್ರಶ್ನೆಯೇ ಇಲ್ಲ ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲೇಬೇಕು.
ಪಿಎಸ್ಐ ನೇಮಕ ಅಕ್ರಮದಲ್ಲಿ ಮಂತ್ರಿಯ ಸಂಬಂಧಿ ಕೈವಾಡದ ಬಗ್ಗೆ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ
ಡಿಕೆಶಿ ಕಡು ಭ್ರಷ್ಟ ಅಂತ ಇದೇ ಉಗ್ರಪ್ಪ ಈ ಹಿಂದೆ ಹೇಳಿದ್ದರು. ಇಂದಿನಿಂದ ಡಿಕೆಶಿ ಬಂಡಾವಾಳ ಬಯಲು ಮಾಡ್ತೇನೆ. ನಾನು ಯಾವುದೇ ರೀತಿಯ ಶಿಫಾರಸ್ಸು ಮಾಡಿಲ್ಲ ನನ್ನ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ. ರಾಜಕೀಯ ಏಳಿಗೆ ಸಹಿಸುತ್ತಿಲ್ಲ ಹಾಗಾಗಿ ಈ ರೀತಿ ಕಾಂಗ್ರೆಸ್‌ನವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ.
ಓರ್ವ ಭ್ರಷ್ಠಾಚಾರಿ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಇವತ್ತಿನಿಂದಲೇ ಇದಕ್ಕೆಲ್ಲ ಉತ್ತರ ನೀಡುತ್ತೇನೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಡಿಕೆಶಿ ಅವರನ್ನೇ ಕೇಳಬೇಕು, ಕಾಂಗ್ರೆಸ್‌ನವರಿಗೆ ನನ್ನ ಮುಖಕ್ಕೆ ಮಸಿ ಬಳೆಯಲು ಸಾಧ್ಯವೇ ಇಲ್ಲ ಎಂದು ಅಶ್ವತ್ಥ್ ನಾರಾಯಣ್ ಗುಡುಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
