ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ಬಿ ಎಂ ಪಾಟೀಲ್ ಸ್ಪಷ್ಟನೆ

ಬಳ್ಳಾರಿ
 
        ಕರ್ನಾಟಕ ರಾಜ್ಯದಲ್ಲಿ 1.16 ಲಕ್ಷ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘಟನೆಯ ಸದಸ್ಯರು ರಾಜ್ಯದ ಪ್ರತಿ ಹಳ್ಳಿಯಲ್ಲಿ ನೆಲೆಸಿದ್ದು, ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ಹಾಗೂ ಕುರುಬ ಜನಾಂಗದವರಿಗೆ ಒಂದು ದೊಡ್ಡ ಕೊಡುಗೆ ಕೊಟ್ಟಿದೆ, ಅದು ಕುರುಬರ ಸಮಾಜದಲ್ಲಿ ಅಗ್ರಗಣ್ಯ ನಾಯಕರಾದ ಸಿದ್ದ ರಾಮಯ್ಯ ನವರನ್ನು ಸಿಎಂ ಪಟ್ಟಕ್ಕೆ ಏರಿಸಿದೆ,ಅದಕ್ಕಾಗಿ ನಾವು ಕಾಂಗ್ರೆಸ್ ಪಕ್ಷ ವನ್ನು ಬೆಂಬಲಿಸಿ ಸುದ್ದಿಗೋಷ್ಟಿಯ ಮುಖಾಂತರಕರ್ನಾಟಕ ಪ್ರದೇಶ ಯುವ ಕುರುಬರ ಸಂಘಟನೆಯ ಅದ್ಯಕ್ಷ ಬಿ ಎಂ ಪಾಟೀಲ್ ಮತಯಾಚನೆ ಮಾಡಿದರು.
        ನಗರದ ಮಯೂರ ಹೋಟೆಲ್ ನಲ್ಲಿ ಕುರುಬ ಸಮುದಾಯದ ಅಪಾರ ಸಂಖ್ಯೆಯೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದರು, ನಂತರ ಮಾತಾನಾಡಿ ಕಾಂಗ್ರೆಸ್ ಪಕ್ಷ ಕುರುಬ ಸಮುದಾಯದ ಮೂರು ನಾಯಕರಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಿದೆ, ಅದರಲ್ಲಿ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ನವರು ಬಹಳ ದೊಡ್ಡ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗುಣಗಾನ ಮಾಡಿ ಬಣ್ಣಿಸಿದರು.
        ಎಂದೆಂದಿಗೂ ಕುರುಬರ ಸಮುದಾಯಕ್ಕೆ ಸಿದ್ದ ರಾಮಯ್ಯ ನವರೆ ನಮ್ಮ ನಾಯಕರು ಎಂದರು, ಬಿಜೆಪಿ ಯಲ್ಲಿ ಬಹಳ ದೊಡ್ಡ ಮತ್ತು ಅಗ್ರಗಣ್ಯ ನಾಯಕರಾದ ಈಶ್ವರಪ್ಪ ನವರು ನಾನು ಕುರುಬ ಸಮುದಾಯದ ನಾಯಕ ಎಂದು ಹೇಳುತ್ತಾರೆ, ಆದರೆ ಬಿಜೆಪಿ ಯಲ್ಲಿ ಒಬ್ಬ ಕುರುಬ ಜನಾಂಗಕ್ಕೆ ಲೋಕಸಭಾ ಚುನಾವಣೆ ಯಲ್ಲಿ ಟಿಕೆಟ್ ಗಿಟ್ಟಿಸುವುದರಲ್ಲಿ ವಿಫಲ ರಾಗಿದ್ದಾರೆ, ಇವರು ಯಾವ ದೊಣ್ಣೆ ನಾಯಕ ಎಂದು ಆರೋಪಿಸಿದರು.
 
        ಈಶ್ವರಪ್ಪ ನವರು ಮಾಜಿ ಉಪ ಮುಖ್ಯಮಂತ್ರಿ ಗಳು ಅವರ ಬಾಯಲ್ಲಿ ಮುಸ್ಲಿಮರ ಬಗ್ಗೆ ಕೀಳು ಮಟ್ಟದ ಮಾತುಗಳು ಹಾಡುವುದು ಅವರಿಗೆ ಶೋಭೆ ತರುವಂತದ್ದಲ್ಲ, ಬಿಜೆಪಿ ಪಕ್ಷದಲ್ಲಿ ಮುಸ್ಲಿಮರಿಗೆ ನಾವು ಟಿಕೆಟ್ ನೀಡುವುದಿಲ್ಲ, ಅದು ಸರಿ ಆದರೆ ನಮ್ಮ ಪಕ್ಷದ ಕಛೇರಿಯಲ್ಲಿ ಕಸ ಗೂಡಿಸಲಿ ಮುಂದೆ ನೋಡೋಣ ಎನ್ನುವ ಮಾತು ಎಷ್ಟು ಸರಿಯಲ್ಲ ಇದು ಖಂಡನೀಯ ಎಂದು ಹೇಳಿದರು, ಮುಸ್ಲಿಂ ಸಮುದಾಯವು ನಮ್ಮ ಸೊದರರಿದ್ದಂತೆ ಅವರ ಬಗ್ಗೆ ಹಗುರವಾದ ಮಾತುಗಳಿಂದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡಿಗಿದರು.
          ನಿಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವೇ ಎಂಬ ಮಾದ್ಯಮದ ಪ್ರಶ್ನೆ ಗೆ ಉತ್ತರಿಸಿದ ಅವರು ರಾಜ್ಯದ ತುಂಬಾ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘಟನೆಯ ಸದಸ್ಯರು ಮೈತ್ರಿ ಅಭ್ಯರ್ಥಿ ಗಳ ಪರವಾಗಿ ಪ್ರಚಾರಕ್ಕೆ ಕರೆಯನ್ನು ನಾವು ನೀಡಿದ್ದು, ಅದರಂತೆ ಮೈಸೂರು, ಚಾಮರಾಜನಗರ, ಕೊಪ್ಪಳ ಹಾಗೆಯೇ ಮಂಡ್ಯದಲ್ಲಿ ನಿಕೀಲ್ ತುಮಕೂರು ಈ ಕ್ಷೇತ್ರದಲ್ಲಿ ಮೂರು ದಿನಗಳಿಂದ ಮತ ಪ್ರಚಾರ ನಡೆಸಿದ್ದಾರೆ ಎಂದು ವಿವರಿಸಿದರು, ಇದರ ಜೊತೆಗೆ ಬಳ್ಳಾರಿಯಲ್ಲಿ ಕೂಡ ಉಗ್ರಪ್ಪ ನವರ ಪರವಾಗಿ ನಾವು ಈಗಾಗಲೆ ಕೆಲವು ಹಳ್ಳಿಯಲ್ಲಿ ಅಬ್ಬರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ,ನಮ್ಮ ಸಮುದಾಯದ ಎಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಅಲ್ಲಿ ಪ್ರಚಾರ ಮತ್ತು ಬೇರೆ ಜಾತಿ ಜನಾಂಗದ ಮತದಾರರಿಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸಾಧನೆ ಹಾಗೂ ಈಗಿನ ಮೈತ್ರಿ ಪಕ್ಷದ ಸಾಧನೆ ಬಗ್ಗೆ ವಿವರಿಸಿ ಉಗ್ರಪ್ಪ ಗೆ ಮತ ನೀಡುವಂತೆ
   
        ಒತ್ತಾಯಿಸಿದ್ದಾರೆ ಎಂಬುದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷ ಅನಿಲ್ ಕುಮಾರ್, ಹೊನ್ನಪ್ಪ ರಾ ಖ,ಶಿವಕುಮಾರ್, ಜಿ, ಉ,ರಾಮಲಿಂಗ,ಯುಗೇಂದ್ರ,ಜಂಭಯ್ಯ ಬಂಡಿಹಟ್ಟಿ ಪಕ್ಕಿರಪ್ಪ ಅಂದ್ರಹಾಳ್,ಮತ್ತಿತರರು ಭಾಗವಹಿಸಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link