ಕಲಬುರಗಿಯಲ್ಲಿ ಪೊಲೀಸರಿಂದ ಫೈರಿಂಗ್

 ಕಲಬುರಗಿ:

ಬೆಳ್ಳಂ ಬೆಳಗ್ಗೆ ಶನಿವಾರ ಎಟಿಎಂ ಕಳ್ಳತನ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ನಗರದಲ್ಲಿ ನಡೆದಿದೆ.
ಹರಿಯಾಣ ಮೂಲದ ತಸ್ಲೀಮ್ ಅಲಿಯಾಸ್ ತಸ್ಸಿ (28 ) ಶರೀಫ್ (22)ಆರೋಪಿಗಳ ಮೇಲೆ ಬೇಲೂರ ಕ್ರಾಸ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎಟಿಎಂ ದರೋಡೆ ಮಾಡಲು ಹೊಂಚು ಹಾಕಿ ಕುಳಿತಾಗ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಲು ಹೋಗಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಸಬ್ ಅರ್ಬನ್ ಠಾಣೆ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್‌ಐ ಬಸವರಾಜ್‌ ಇಬ್ಬರ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಹಾಗೂ ಕಾನಸ್ಟೇಬಲ್ ಗಳಾದ ಮಂಜು, ಫಿರೋಜ , ರಾಜಕುಮಾರ್ ಗಾಯಗೊಂಡಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿಯಲ್ಲಿ ಇದೆ ತಿಂಗಳು 9 ರಂದು ಪೂಜಾರಿ ಚೌಕ್ ಬಳಿ ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 18 ಲಕ್ಷ ರೂಪಾಯಿ ದೋಚಿದ್ದರು. ಪುನಃ ಶನಿವಾರ ಎಟಿಎಂ ಕಳ್ಳತನಕ್ಕೆ ಯತ್ನಸಿದ್ದರು. ಶರಣಾಗಲು ಪೊಲೀಸರು ಹೇಳಿದ್ದರು ಶರಣಾಗದೆ ಹಲ್ಲೆ ಮಾಡಿದಾಗ ಆತ್ಮ ರಕ್ಷಣೆಗಾಗಿ ಕೊನೆಗೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆರೋಪಗಳನ್ನು ಬಂಧಿಸಿದ್ದಾರೆ.ಏಪ್ರಿಲ್ 9 ರಂದು ಎಸ್‌ಬಿಐ ಎಟಿಎಮ್ ದರೋಡೆ ಪ್ರಕರಣದ ಆರೋಪಿಗಳಾಗಿದ್ದರು. ಬೇಲೂರು ಕ್ರಾಸ್ ಬಳಿ ಪುನ: ಎಟಿಎಂ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಪೊಲೀಸರು ಅವರನ್ನು ಬಂಧಿಸಲು ತೆರಳಿದ್ದ ವೇಳೆ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನಮ್ಮ ಸಿಬ್ಬಂದಿ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿ ಅವರನ್ನು ಬಂಧಿಸಿ ಟ್ರಾಮಾ ಕೇರ್ ಸೆಂಟರನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಕಳೆದ 9 ರಂದು ಎಟಿಎಮ್ ದರೋಡೆ ದಿನ ಎಟಿಎಮ್ ಮುಂಭಾಗದಿಂದ ಐ 20 ಬಿಳಿಬಣ್ಣದ ಕಾರು ಹೋಗಿತ್ತು.

ಫೈರಿಂಗ್ ಸಂದರ್ಭದಲ್ಲಿ ಐ20 ಕಾರಿನಲ್ಲಿ ನಾಲ್ವರು ಇದ್ದರು. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ದರೋಡೆಕೋರ ತಸ್ಲೀಂ ವಿರುದ್ಧ 8 ಪ್ರಕರಣ, ಶರೀಫ್ ವಿರುದ್ಧ 3 ಪ್ರಕರಣ, ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಟಿಎಮ್‌ಗಳನ್ನೆ ದರೋಡೆ ಮಾಡ್ತಿದ್ದ ಗ್ಯಾಂಗ್ ಇದಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ತಿಳಿಸಿದ್ದಾರೆ.