ಕಳಪೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

ಬ್ಯಾಡಗಿ:

               ತಾಲೂಕಿನಲ್ಲಿ ನೂರು ವರ್ಷ ಬಾಳಿಕೆ ಬಂದ ಹಲವಾರು ಶಾಲಾ ಕಟ್ಟಡಗಳು. ಸ್ವಾತಂತ್ರ್ಯಕ್ಕೂ ಮುನ್ನ ಪಟ್ಟಣದಲ್ಲಿ ನಿರ್ಮಿಸಲಾದ ಹಳೆ ಪುರಸಭೆ ಇಂದಿಗೂ ಸುಸಜ್ಜಿತವಾಗಿವೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೋಟಿಗಳಲ್ಲಿ ನಿರ್ಮಿಸಲಾದ ಕಾಮಗಾರಿಗಳು ನೆಲ ಕಚ್ಚುತ್ತಿವೆ. ಕಳಪೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಒಂದು ವೇಳೆ ಅಧಿಕಾರಿಗಳು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದರೆ ಕಠಿಣಕ್ರಮಎದುರಿಸಲು ಸಿದ್ದಾರಾಗಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಪಂಚಾಯತ್‍ರಾಜ್ ಅಧಿಕಾರಿಗಳನ್ನು ಎಚ್ಚರಿಸಿದ ಘಟನೆ ಬುಧವಾರ ನಡೆದತಾಪಂ ಕೆಪಿಪಿ ಸಭೆಯಲ್ಲಿ ನಡೆಯಿತು.
             ಪಂಚಾಯತ್‍ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಬದಲ್ಲಿ ಮಾತನಾಡಿದಅವರು ಇಗಾಗಲೆ ತಾಲೂಕಿನಲ್ಲಿತಮ್ಮ ಇಲಾಖೆ ವತಿಯಿಂದ ಶಾಲಾ ಕೊಠಡಿಗಳ ನಿರ್ಮಾಣಕಾರ್ಯದಲ್ಲಿ ಸಾಕಷ್ಟು ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಆರೋಪ ಗಳು ಕೇಳಿ ಬರುತ್ತಿವೆಗುಣಮಟ್ಟದಲ್ಲಿರಾಜಿಯಾಗುವ ಪ್ರಶ್ನೇಯೆಇಲ್ಲ, ಕಳಪೆ ಕಾಮಗಾರಿಗೆ ನೇರವಾಗಿ ಅಧಿಕಾರಿಗಳೆ ಹೊ ಣೆ, ಇದುಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆಎಂದುಎಲ್ಲ ಇಲಾಖೆ ಅಧಿಕಾರಿಗಳಿಗೆ ಪರೋಕ್ಷವಾಗಿಕುಟುಕಿದರು.
                ಅನಾಹುತ ತಪ್ಪಿಸಿ:ಬ್ಯಾಡಗಿ ತಿಳುವಳ್ಳಿ ರಸ್ತೆ ನಿರ್ಮಿಸಿದ ಕೆಲ ವರ್ಷಗಳಲ್ಲೆ ಹಾಳಾಗಿದೆ. ಈ ಕುರಿತಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಇಲ್ಲಿಯವರೆಗೂ ಅಲ್ಲದೇ ರಸ್ತೆಯಲ್ಲಿ ಅನೇಕ ತಿರುವುಗಳಿದ್ದು ಯಾವುದೇರಕ್ಷಣಾ ಫಲಕಗಳಿಲ್ಲ ಇದರಿಂದ ಅನಾಹುತಗಳು ಸಂಭವಿಸುವುದು ಸರ್ವೆ ಸಮಾನ್ಯವಾಗಿವೆ. ಕೂಡಲೇ ತಿರುವುಗಳಲ್ಲಿ ಸೂಚನಾ ಫಲಕ, ರಕ್ಷಣಾಗೋಡೆ ಗಳನ್ನು ಅಳವಡಿಸಿ ಎಂದರು.ಇದಕ್ಕೆನೀಡಿದಅಧಿಕಾರಿ ಈ ಕುರಿತಂತೆ ಪ್ರತಿಕ್ರಿಯೆಕ್ರಮ ವಹಿಸುವುದಾಗಿ ತಿಳಿಸಿದರು.

                ಗಿಡ ನೆಡುವುದಷ್ಟೇ ನಿಮ್ಮ ಕೇಲಸವಲ್ಲ:ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಬದಲ್ಲಿ ಮಾತನಾಡಿದ ಇಒ ಜಯಕುಮಾರ ಪ್ರತಿ ವರ್ಷಗಿಡ ನೆಡುತ್ತೇವೆಎಂದುದಾಖಲಾತಿಒದಗಿಸುತ್ತಿರಿ,ಆದರೆಅಲ್ಲಿ ಗಿಡಗಳೆ ಇರುವುದಿಲ್ಲ ಅಲ್ಲದೇಅವುಗಳ ಸಂರಕ್ಷಣೆಗೆವರ್ಷಕ್ಕೆ ಸಾಕಷ್ಟು ಅನುದಾವನ್ನುಬಳಕೆ ಮಾಡುತ್ತಿದ್ದೀರಿ ಹೀಗಿದ್ದರೂ ಗಿಡಗಳು ಬೇಳೆಯುತ್ತಿಲ್ಲ ಯಾಕೇ..?ಎಂದುಅರಣ್ಯಾಧಿಕಾರಿಯನ್ನು ಪ್ರಶ್ನಿಸಿದರು..
                   ಇದಕ್ಕೆ ಉತ್ತರಿಸಿದ ಅಧಿಕಾರಿಒಂದು ವೇಳೆ ಗಿಡಗಳು ಬೆಳೆಯದಿದ್ದಲ್ಲಿ ಅಲ್ಲಿ ಮತ್ತೊಂದುಗಿಡ ನೆಡುತ್ತೇವೆಎಂದಾಗ ಮತ್ತಷ್ಟು ಆಕ್ರೋಶಗೊಂಡಜಯಕುಮಾರ ಈ ರೀತಿಯ ಕಾಗಕ್ಕ ಗುಬ್ಬಕ್ಕಕಥೆ ಹೇಳುವುದು ಬಿಟ್ಟುರೈತರಿಗೆ ಅನೂಕೂಲವಾಗುವ ಹಣ್ಣಿನ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿಎಂದುಖಡಕಆಗಿ ಎಚ್ಚರಿಸಿದರು..
                   ಶಾಲೆ ಮುಗಿದ್ಮ್ಯಾಲೇಶೂ ಕೊಡ್ತಿರಾ?:ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಬದಲ್ಲಿ ಮಾತನಾಡಿದ ಕೆಡಿಸಿಉಪಾಧ್ಯಕ್ಷೆ ಶಾಂತಮ್ಮದೇಸಾಯಿತಾಲೂಕಿದ್ಯಂತಇನ್ನೂಅರ್ಧದಷ್ಟು ಶಾಲೆಗಳಿಗೆ ಶೂ ಸಾಕ್ಸ ವಿತರಣೆಯಾಗಿಲ್ಲ ಎಂಬ ಆರೋಪಗಳಿವೆ ಯಾಕಿಷ್ಟು ವಿಳಂಬ, ಶಾಲೆ ಮುಗಿದ ಮೇಲೆ ಮಕ್ಕಳಿಗೆ ಶೂ ಕೊಡುತ್ತಿರಾ..? ಎಂದು ಸಮನ್ವಾಧಿಕಾರಿಯನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಎಂ.ಎಫ್ ಬಾರ್ಕಿ ಇಗಾಗಲೆ ಶೇ.98 ರಷ್ಟು ಶಾಲೆಗಳಲ್ಲಿ ಶೂ ಖರೀದಿಸಲಾಗಿದೆ ಎಂದಾದಯಾಕೇ ಸುಳ್ಳು ವರದಿ ಸಲ್ಲಿಸುತ್ತಿರಿ.?ಬನ್ನಿ ನಮ್ಮ ಮಾಸಣಗಿಊರಲ್ಲೆಇನ್ನೂ ಮಕ್ಕಳಿಗೆ ಶೂ ದೊರೆತಿಲ್ಲಎಂದರು.ಈ ಕುರಿತಂತೆಖುದ್ದಾಗಿ ಪರಿಶೀಲಿಸುವುದಾಗಿಅಧಿಕಾರಿ ತಿಳಿಸಿದರು.
                 ಜನೌಷದಿ ಮಳಿಗೆಯಲ್ಲ ಔಷಧಿಕೊರತೆ:ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಬದಲ್ಲಿ ಮಾತನಾಡಿದತಾಲೂಕಾ ವೈದ್ಯಾಧಿಕಾರಿಡಾ.ಪುಟ್ಟರಾಜಜನೌಷದಿ ಮಳಿಗೆಯಲ್ಲಿ 700 ಔಷಧಿಗಳಗಲ್ಲಿ ಇದೀಗ ಕೇವಲ 250 ಔಷಧಿಗಳು ಮಾತ್ರ ಲಭ್ಯವಾಗುತ್ತಿವೆ ಈ ಕುರಿತಂತೆ ಹಲವಾರು ಬಾರಿಜಿಲ್ಲಾ ಹಂತದ ಅಧಿಕಾರಿಗಳಿಗೆ ತಿಳಿಸಲಾಗದೆ. ಯಾವುದೇ ಪ್ರಯೋಜನವಾಗಿಲ್ಲ ಸಾರ್ವಜನಿಕರು ಪ್ರತಿ ದಿನ ಪ್ರಶ್ನೆ ಮಾಡುತ್ತಿದ್ದುಆಗಿರುವ ಸಮಸ್ಯೆಗೆತಮ್ಮ ಹಂತದಲ್ಲಿ ಪರಿಹಾರ ಒದಗಿಸಿ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.ಇದಕ್ಕೆ ಪ್ರತಿಕ್ರಿಯೇ ನೀಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಈ ಕುರಿತಂತೆಜಿಲ್ಲಾ ಹಂತ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

Recent Articles

spot_img

Related Stories

Share via
Copy link