ಶಿಗ್ಗಾವಿ :
ಸವಣೂರ ತಾಲೂಕ ಪುರಸಭೆಯ ಒಟ್ಟು 27 ವಾರ್ಡಗಳ ಚುನಾವಣಾ ಫಲಿತಾಂಶದ ಪೈಕಿ 15 ಸ್ಥಾನಗಳನ್ನು ಕಾಂಗ್ರೇಸ್ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆದ ಹಿನ್ನೆಲೆಯಲ್ಲಿ ಶಿಗ್ಗಾವಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸವಣೂರ ಸರ್ಕಲ್ ಮತ್ತು ಹಳೆ ಬಸ್ ನಿಲ್ದಾಣದ ಎದುರಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಅಚರಿಸುವ ಮೂಲಕ ಸಂಭ್ರಮಿಸಿದರು.
ಬಹುಮತಕ್ಕೆ 14 ಸಂಖ್ಯಾಬಲ ಬೇಕಾಗಿತ್ತು ಇದರಲ್ಲಿ ಬಿಜೆಪಿ 8, ಜೆಡಿಎಸ್ 2 ಮತ್ತು 2 ಪಕ್ಷೇತರರು ಗೆಲುವು ಸಾಧಿಸಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿಯವರಿಗೆ ಹಿನ್ನೆಡೆಯಾಗುವಂತೆ ಈ ಫಲಿತಾಂಶ ಮಾಡಿದೆ.
ವಿಜಯೋತ್ಸವದಲ್ಲಿ ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಕಾರ್ಯಾದ್ಯಕ್ಷ ವಿರೇಶ ಆಜೂರ, ಮುಖಂಡರಾದ ಗುಡ್ಡಪ್ಪ ಜಲದಿ, ಮಂಜುನಾಥ ಮಣ್ಣಣ್ಣವರ, ಗೌಸ್‍ಖಾನ್ ಮುನಶಿ, ಅತ್ತಾವುಲ್ಲಾ ಖಾನ್, ಸುಲೆಮಾನ್ ತರ್ಲಘಟ್ಟ, ಘನಿ ಮನಿಯಾರ, ರಫೀಕ್ ಸವಣೂರ, ಎಮ್ ಮಲ್ಲೂರ, ಮೌಲಾ ದೊಡ್ಡಮನಿ, ಅಲ್ಲಾಭಕ್ಷ ಪಠಾಣ್ ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ