ಹಾವೇರಿ :
ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ, ಪಕ್ಷ ಸಂಘಟನೆಗೆ ಸುಮಾರು 20 ವರ್ಷಳ ಕಾಲ ನಿರಂತವಾಗಿ ಶ್ರಮವಹಿಸಿ ಮಾಜಿ ಸಚಿವರ ಹಿಂಬಾಲಿಕರ ಕುತಂತ್ರದಿಂದ ನನಗೆ ನಗರಸಭೆ ಟಿಕೇಟ್ ತಪ್ಪಿಸಿದ್ದರಿಂದ ನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಶ್ರೀಮತಿ ರತ್ನಾ ಎಸ್ ಭಿಮ್ಮಕ್ಕನವರ ಹೇಳಿದರು.
ನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಗರಸಭೆಗೆ 2 ಬಾರಿ ಸದಸ್ಯರಾಗಿ ಪಕ್ಷದ ಸಂಘಟನೆಗೆ ಹೆಚ್ಚು ಮಹತ್ವ ನೀಡಿದ್ದೇನೆ. ಕಾಂಗ್ರೇಸ್ ಪಕ್ಷದಲ್ಲಿ ಮಹಿಳೆಯರಿಗೆ ಹಾಗೂ ವಿದ್ಯಾವಂತರಿಗೆ ಗೌರವವಿಲ್ಲ. ಈ ಬಾರಿ 29 ನೇ ವಾರ್ಡಿನಿಂದ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದೆ. ನನಗೆ ಬಿ ಪಾರಂ ರಡಿ ಮಾಡಲಾಗಿತ್ತು.ಆದರೆ ರುದ್ರಪ್ಪ ಲಮಾಣಿಯವರ ಹಿಂಬಾಲಕರು ಬಿ ಪಾರಂ ಹರಿದು ಹಾಕಿ ತಾವು ಹೇಳಿದ ಹಾಗೆ ಕೇಳುವವರಿಗೆ ಟಿಕೇಟ್ ನೀಡಿದ್ದಾರೆ.ವಿದ್ಯಾವಂತರಿಗೆ ಬೆಲೆನೆ ಇಲ್ಲವಾ ? ನನಗೂ ಸೇರಿದಂತೆ ಇನ್ನಿತರ ಪಕ್ಷದ ನಿಷ್ಠಾವಂತ ಸಹೋದರರಿಗೂ ಅನ್ಯಾಯವಾಗಿದೆ. ನಗರದಲ್ಲಿ ಕಾಂಗ್ರೇಸ್ ನೆಲಕಚ್ಚಿದೆ.
ಸುಮಾರು 6-7 ಸೀಟು ಮಾತ್ರ ಗೆಲ್ಲಬಹುದು. ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿಯವರ ಪರವಾಗಿ ಮಹಿಳಾ ಕಾರ್ಯಕರ್ತರೊಂದಿಗೆ ಶ್ರಮವಹಿಸಿ ದುಡಿದರೂ ನಗರಸಭೆ ಟಿಕೇಟ್ ನೀಡಲಿಲ್ಲ ಎಂದರೆ ಇದೆಂತಾ ನ್ಯಾಯ ? ಎಂದು ಆಕ್ರೋಶಿತರಾಗಿ ಕಾಂಗ್ರೇಸ್ ಮುಖಂಡರ ವಿರುದ್ಧ ಹರಿಹಾದರು. ಕಾಂಗ್ರೇಸ್ ಪಕ್ಷದಲ್ಲಿ ಗೋಮುಖ ವ್ಯಾಘ್ರಗಳಂತಹ ವ್ಯಕ್ತಿಗಳ ಕೈಯಲ್ಲಿ ಇರುವುದರಿಂದ ಪಕ್ಷ ಹೇಗೆ ಸಂಘಟನೆಯಾಗಲು ಸಾಧ್ಯ. ಅಲ್ಲಿನ ನಾಯಕರೆ ಪಕ್ಷದ ಡ್ಯಾಮೇಜ್ ಹಾಳು ಮಾಡಿದ್ದಾರೆ.ನನ್ನ ಏಳಿಗೆ ಸಹಿಸುತ್ತಿಲ್ಲ ಆಗಾಗಿ ಟಿಕೇಟ್ ತಪ್ಪಿಸಲು ಮುಂದಾಗಿದ್ದಾರೆ.
ಕಾಂಗ್ರೇಸ್‍ದಲ್ಲಿ ಸ್ವಹಿತಾಸಕ್ತಿ ಬೆಳೆ ಬ್ಯೆಯಿಸಿಕೊಳ್ಳುವವರೆ ಹೆಚ್ಚಿದ್ದಾರೆ. ಇಂತಹ ವಾತಾವರಣದಲ್ಲಿ ಇರಲು ಸಾಧ್ಯವಾಗದೇ ದಿ 22 ರಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಶ್ರೀಮತಿ ರತ್ನಾ ಎಸ್ ಭಿಮ್ಮಕ್ಕನವರ ತಿಳಿಸಿದರು.