ಕಾಂಗ್ರೇಸ್ ಪಕ್ಷದ ವಿಜಯೋತ್ಸವ

ಹಾನಗಲ್ಲ :

               ಹಾನಗಲ್ಲ ಪುರಸಭೆಯಲ್ಲಿ ವಿಜಯಿಯಾದ ಕಾಂಗ್ರೇಸ್ ಪಕ್ಷದ ವಿಜಯೋತ್ಸವ ಸೆ.8 ರಂದು ಹಾನಗಲ್ಲಿನಲ್ಲಿ ಆಯೋಜಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟೀಲ ಹಾಗೂ ನಗರ ಅಧ್ಯಕ್ಷ ಎಂ.ಕೆ.ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
               ಶನಿವಾರ ಮಧ್ಯಾಹ್ನ 3 ಘಂಟೆಗೆ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ವಿಜಯೋತ್ಸವದ ಮೆರವಣೆಗೆ ಆರಂಭಿಸಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮೆರವಣಿಗೆ ವಿಜಯನಗರದ ನೂರಾನಿ ಸಭಾಂಗಣ ತಲುಪಿ ಅಲ್ಲಿ ಸಭಾ ಕಾರ್ಯಕ್ರಮ ನಡೆಯುವುದು.
                ಮಾಜಿ ಸಚಿವ ಮನೋಹರ ತಹಶೀಲ್ದಾರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಮಾನೆ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸದಸ್ಯ ಸತೀಶ ದೇಶಪಾಂಡೆ, ಬಿ.ಶಿವಪ್ಪ, ಜಿಪಂ ಸದಸ್ಯ ಟಾಕನಗೌಡ ಪಾಟೀಲ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಿಂದ ನೂತನವಾಗಿ ಹಾನಗಲ್ಲ ಪುರಸಭೆಗೆ ಆಯ್ಕೆಯಾದ 19 ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link