ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಲಾಗುತ್ತದೆ : ಸ್ಮೃತಿ ಇರಾನಿ

ಬಳ್ಳಾರಿ 

       ಕೈಗಾರಿಕೆಗಳಿಗೆ ಸಾಲ ಸೌಲಭ್ಯ, ಹಾಗೂ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಜವಳಿ ಮಂತ್ರಿ ಶ್ರೀಮತಿ.ಸ್ಮೃತಿ ಇರಾನಿ ಅವರು ಹೇಳಿದರು.

       ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಕೇಂದ್ರದಲ್ಲಿ ಬುಧುವಾರದಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

      ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “100 ದಿನಗಳ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಘಟಕಗಳಿಗೆ ಬೆಂಬಲ” ಕಾರ್ಯಕ್ರಮದಲ್ಲಿ ಕೈಗಾರಿಕೆಗಳಿಗೆ ಸಾಲ ಸೌಲಭ್ಯ, ಹಾಗೂ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಳನ್ನು ಒದಗಿಸಿರುದಾಗಿ ತಿಳಿಸಿದ ಅವರು, ಘಟಕಗಳು ಜಿ.ಎಸ್.ಟಿ ನೋಂದಣಿ ಮಾಡಿದ್ದಲ್ಲಿ ಬಡ್ಡಿ ಸಹಾಯಧನದ ಸೌಲಭ್ಯ ಸಹ ಪಡೆಯಲು ಮನವಿ ಮಾಡಿದರು. ಕೇಂದ್ರ ಸರಕಾರದ ಜವಳಿ ಇಲಾಖೆಯಿಂದ ಲಭ್ಯವಿರುವ ಎಸ್.ಐ.ಟಿ.ಪಿ ಯೋಜನೆಯಡಿ ಜವಳಿ ಪಾರ್ಕ್ ಸ್ಥಾಪಿಸಲು ಸೌಲಭ್ಯಗಳನ್ನು ಪಡೆಯಲು ಸಹ ಮಂತ್ರಿಗಳು ತಿಳಿಸಿದರು.

      ಜಿಲ್ಲೆಯಿಂದ ಜೀನ್ಸ್ ಉದ್ದಿಮೆದಾರ ತಂಡವು ಬಳ್ಳಾರಿಯ ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾದ್ ಮನೋಹರ್ ರವರ ನೇತೃತ್ವದಲ್ಲಿ ಭಾಗವಹಿಸಿದರು. ಕೇಂದ್ರ ಸಾಮಾಜಿಕ ನ್ಯಾಯ ಮಂತ್ರಿ ಶ್ರೀ.ಥಾವರ್ ಚಂದ್ ಗೆಹಲೋತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ತಂಡದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಮಂಜುನಾಥ ಗೌಡ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ವಿಠಲ್ ರಾಜು, ಕಾರ್ಯಕ್ರಮದಲ್ಲಿ ಉದ್ದಿಮೆದಾರರು ಈ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಸಹ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ರಫ್ತು ಉತ್ತೇಜನೆಗಾಗಿ ಘಟಕಗಳು ಎಕ್ಸ್ ಪೋರ್ಟ ಕೌನ್ಸಿಲ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link