ಕಾವೇರಿದ ಚುನಾವಣೆ

ಹಾವೇರಿ :

              ನಗರಸಭೆಯ ಚುನಾವಣೆ ದಿನದ ದಿನಕ್ಕೆ ಬಾರಿ ಸ್ಪರ್ಧೆಯ ಪೈಪೋಟಿ ನಡೆಯುತ್ತಿದ್ದು, ಸ್ಪರ್ಧಾಳುಗಳು ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಇಲ್ಲಿನ ನಗರಸಭೆಯ 1 ನೇ ವಾರ್ಡಿನ ಎಸ್‍ಟಿ ಮಿಸಲು ಕ್ಷೇತ್ರವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ ಪೂಜಾರ ವಾರ್ಡಿನ ಅಪಾರ ಬೆಂಬಲಿಗರೊಂದಿಗೆ ಮನೆ ಮನೆ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಶ್ರೀಕಾಂತ ಪೂಜಾರ 1ನೇ ವಾರ್ಡಿನ ಜನರು ಅಭಿಮಾನದಿಂದ ಪಕ್ಷೇತರವಾಗಿ ಚುನಾವಣೆ ಎದುರಿಸಲು ಪ್ರೇರೆಪಿಸಿದ್ದಾರೆ. ಈ ವಾರ್ಡಿನಲ್ಲಿ ಬಡ ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರೆ ಹೆಚ್ಚಾಗಿದ್ದು, ಸರ್ಕಾರ ಸೌಲಭ್ಯದ ಅವಶ್ಯಕವಾಗಿದೆ. ನಾನು ವಿಧ್ಯಾವಂತನಾಗಿದ್ದು, ಈ ವಾರ್ಡಿನ ಸಮಸ್ಯೆಗಳ ಅರಿವು ಇದೆ. ವಾರ್ಡಿನ ಯುವಕರಿಗೆ, ಮಹಿಳೆಯರಿಗೆ ಹಾಗೂ ಹಿರಿಯರಿಗೆ ಸೂಕ್ತ ಸರ್ಕಾರಿ ಸೌಲಭ್ಯ ಒದಗಿಸುವುದೇ ನನ್ನ ಉದ್ದೇಶವಾಗಿದೆ. ಎಲ್ಲ ವರ್ಗದ ಜನರ ಹಿತಾಸಕ್ತಿಗೆ ಅನುಗುಣವಾಗಿ ಜನರಿಗೆ ಬೇಕಾಗುವ ಕುಡಿಯುವ ನೀರಿನ ವ್ಯವಸ್ಥೆ. ಸುಸರ್ಜಿತವಾದ ರಸ್ತೆಗಳು.ಗುಣಮಟ್ಟದ ಚರಂಡಿ ಮೂಲಭೂತ ಸೌಲಭ್ಯ ಒದಗಿಸಲು ಬದ್ದನಾಗಿದ್ದೇನೆ. ಎಲ್ಲರ ಅಪೇಕ್ಷೆಯ ಮೇರಿಗೆ ನಾನು ಹಗಲಿರುಳು ಶ್ರಮ ವಹಿಸಲು ಸಿದ್ದನಿದ್ದೇನೆ.

              ವಾರ್ಡನ ಜನರು ನನ್ನ ಚಿಹ್ನೆಯಾದ ದೂರದರ್ಶನ(ಟಿವಿ) ಗುರುತಿಗೆ ಮತ ಹಾಕುವ ಮೂಲಕ ನನಗೆ ಆರ್ಶಿವಾದ ಮಾqಬೇಕೆಂದು ವಿನಂತಿಯ ಮೂಲಕ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು. ವಾರ್ಡಿನ ಮುಖಂಡರು ವಕೀಲರಾದ ರವಿ ಕಬಾಡಿ ಮಾತನಾಡಿ ರಾಷ್ಟೀಯ ಪಕ್ಷ ಒಂದು ಟಿಕೇಟ್ ನೀಡುತ್ತೇವೆ ಎಂದು ಹೇಳಿ ವಂಚಿಸಿದಾಗ ವಾರ್ಡಿನ ಜನರು ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿಬೇಕು ಎಂದು ಶ್ರೀಕಾಂತ ಪೂಜಾರ ಅವರನ್ನು ಬೆಂಬಲಿಸಿ ಗೆಲುವಿಗೆ ಶ್ರಮವಹಿಸುತ್ತಿದ್ದೇವೆ. ವಾರ್ಡಿನ ಸರ್ವಾಂಗಣ ಅಭಿವೃದ್ಧಿ ಆಗಬೇಕಾದರೆ ಶ್ರೀಕಾಂತ ಪೂಜಾರ ಜಯಶಾಲಿಯಾಗಬೇಕಾಗಿದೆ. ಮತದಾರರು ಟಿವಿ ಗುರುತಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸವಿದೆ ಎಂದು ಹೇಳಿದರು. ಪ್ರಚಾರದಲ್ಲಿ ವಕೀಲರಾದ ಉಲರ್ ರಜಾಕನವರ.ಫಕ್ಕಿರೇಶ ಮಾಳಗಿ.ಶಂಕರ ಕರಬಸನಗೌಡ್ರ.ರವಿ ದೊಡ್ಡತಳವಾರ.ಮೇಗರಾಜ ಕನವಳ್ಳಿ.ಮಂಜು ಕೊತವಾಲ್.ಜಗದೀಶ ಕೇಸರಳ್ಳಿ.ಚೆನ್ನಪ್ಪ ಕೋಟಿ.ನಜೀರಸಾಬ ಮಾಳಗಿ.ಸಿದ್ದರಾಜ ಶಾಬಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link