ಕುಗ್ರಾಮದ ಬಡತನದಲ್ಲಿ ಜನಿಸಿದ ಸರ್‍ಎಂ.ವಿ. ಲೋಕೋತ್ತರರಾದರು

 ಪಾವಗಡ

    ಭಾರತ ರತ್ನ ಪುರಸ್ಕೃತ ಸರ್ ಎಂ ವಿಶ್ವೇಶ್ವರಯ್ಯನವರ ಕೀರ್ತಿ ಕೇವಲ ಕರ್ನಾಟಕ ಮತ್ತು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿರದೆ, ಇಡೀ ಪ್ರಪಂಚದಲ್ಲೇ ಪ್ರಸಿದ್ದವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ
ಮಹಮದ್ ಇಮ್ರಾನ್ ತಿಳಿಸಿದರು.

     ಭಾರತ ರತ್ನ ಪುರಸ್ಕೃತ ಸರ್ ಎಂ ವಿಶ್ವೇಶ್ವರಯ್ಯನವರ 157ನೇ ಜನ್ಮದಿನದ ಅಂಗವಾಗಿ ಮಂಗಳವಾರ ಸಂಜೆ ರೋಟರಿ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸರ್.ಎಂ ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಮತ್ತು ಬೆಂಗಳೂರಿನಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದರು. ಮಹಾರಾಷ್ಟ್ರದ ಪುಣೆಯಲ್ಲಿ ಎಂಜಿನಿಯರರಿಂಗ್ ಪದವಿ ಪಡೆದು ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಪ್ರಾರಂಭಿಸಿದ ಅವರು ಮೈಸೂರಿನ ದಿವಾನರಾಗಿ ಬ್ರಿಟೀಷ್ ಸರ್ಕಾರದಿಂದ “ಸರ್” ಎಂಬ ಬಿರುದನ್ನು ಪಡೆದರು. ಇತಿಹಾಸ ಪುಟಗಳಲ್ಲಿ ಇಂದಿಗೂ ಅವರು ನಿರ್ಮಿಸಿರುವ ಕಟ್ಟಡಗಳು, ಕೆರೆಕಟ್ಟೆಗಳು, ನೀರಾವರಿ ಯೋಜನೆಗಳು, ಡ್ಯಾಂಗಳು ಅವರ ಬುದ್ದಿಶಕ್ತಿಗಿದ್ದ ಸಾರವನ್ನು ಸಾರಿ ಹೇಳುತ್ತಿವೆ ಎಂದು ತಿಳಿಸಿದರು.

     ಸನ್ಮಾನ ಸ್ವೀಕರಿಸಿ ಸಿವಿಲ್ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ ಇಡೀ ಪ್ರಪಂಚಕ್ಕೆ ಮಾದರಿ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯರವರ ಜನ್ಮದಿನವನ್ನು ಪಾವಗಡದ ರೋಟರಿ ಸಂಸ್ಥೆ ಆಚರಿಸುತ್ತಿರುವುದು ಶ್ಲಾಘನೀಯವಾದುದು ಎಂದರು.

ಎಂಜಿನಿಯರ್ ನರಸಿಂಹ ಮೂರ್ತಿ ಮಾತನಾಡಿದರು. ಪುರಸಭಾ ಎಂಜಿನಿಯರ್ ಧನಂಜಯ, ಸಿವಿಲ್ ಎಂಜಿನಿಯರ್‍ಗಳಾದ ನರಸಿಂಹಮೂರ್ತಿ ಮತ್ತು ಶ್ರೀನಿವಾಸ್ ರವರನ್ನು ಸನ್ಮಾನಿಸಲಾಯಿತು.

      ರೋಟರಿ ಮಾಜಿ ಅಧ್ಯಕ್ಷರುಗಳಾದ ಎಂ. ಎಸ್. ವಿಶ್ವನಾಥ್, ಗೊರ್ತಿನಾಗರಾಜು, ಡಾ.ಪ್ರಭಾಕರ್, ಕಮಲ್‍ಬಾಬು, ಕನ್ನಮೇಡಿಲೋಕೇಶ್, ರೋಟರಿ ಕಾರ್ಯದರ್ಶಿ ನಂದೀಶ್‍ಬಾಬು, ಜಂಟಿ ಕಾರ್ಯದರ್ಶಿ ಮಾನಂ ಶಶಿಕಿರಣ್, ಕಟ್ಟಾನರಸಿಂಹಮೂರ್ತಿ, ಶ್ರಾವಣ್‍ರೆಡ್ಡಿ, ರಂಜಿತ್, ಕಾರ್ತೀಕ್, ರಾಸಿನೇನಿಸಂತೋಷ್‍ಕುಮಾರ್ ಮತ್ತಿತರರು ಹಾಜರಿದ್ದರು.
         

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap