ತುಮಕೂರು
ಜಿಲ್ಲೆಯಲ್ಲಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕರುಗಳ ಮೇಲೆ ಕಾನೂನು ಕ್ರಮ ಕೈಗೊಂಡು ಅವರ ಚಾಲನಾ ಪರವಾನಗಿಗಳನ್ನು ತಾತ್ಕಾಲಿಕವಾಗಿ ಅಮಾನತ್ತುಗೊಳಿಸಲು ಕೋರಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಛೇರಿಗೆ ಕಳುಹಿಸಿದ್ದು, ಈ ಪೈಕಿ ಈಗಾಗಲೇ 14 ಜನರ ಚಾಲನಾ ಪರವಾನಗಿಗಳನ್ನು ಅಮಾನತ್ತುಪಡಿಸಲಾಗಿದೆ. 38 ಚಾಲಕರುಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಸಾರ್ವಜನಿಕರು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಿದಲ್ಲಿ ಅವರುಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಲ್ಲದೇ ಅವರ ಚಾಲನಾ ಪರವಾನಗಿಗಳನ್ನು ಸಹ ಅಮಾನತ್ತುಪಡಿಸಿಕೊಳ್ಳಲಾಗುವುದು. ಆದುದರಿಂದ ಸಾರ್ವಜನಿಕರು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಹಾಗೂ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ವಾಹನ ಚಾಲನೆ ಮಾಡಿ ಅಪಘಾತಗಳನ್ನು ತಡೆಗಟ್ಟಲು ಸಹಕರಿಸಲು ಕೋರಿದೆ.