ಕುತೂಹಲಕಾರಿ ಪುಸ್ತಕಗಳ ಆಧ್ಯಯನಕ್ಕೆ ಕರೆ

ದಾವಣಗೆರೆ:

ಮನಸ್ಸಿಟ್ಟು ಓದಿದಾಗ ಮಾತ್ರ ಭವಿಷ್ಯಕ್ಕೆ ಅದು ಸಹಕಾರಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪದ್ಮಾಬಸವಂತಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನಲ್ಲಿಂದು ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದಿಂದ ಆಯೋಜಿಸಿದ್ದ ಮಾರ್ಚ್ 2018ರಲ್ಲಿ ನಡೆದ ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸನ್ಮಾನ ಸಣ್ಣದ್ದೆ ಇರಬಹುದು. ಅದರಿಂದ ಬರುವ ಖುಷಿ, ಗೌರವ ದೊಡ್ಡದು. ವಿದ್ಯಾರ್ಥಿಗಳು ಯಾವ ವಿಚಾರ ಗೊತ್ತಿಲ್ಲದಿರುವುದಿಲ್ಲವೋ ಅಂತಹ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ರೋಚಕತೆ ಇರುತ್ತದೆ. ಕುತೂಹಲ ಹುಟ್ಟಿಸುವ ಓದುಗಳು ಮತ್ತು ಪಠ್ಯಪುಸ್ತಕಕ್ಕೆ ಸಹಕಾರಿಯಾಗುವಂತ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕ ಎಂದರು.

ಪೋಷಕರು ತಮ್ಮ ಮಕ್ಕಳು ಕೇವಲ ಡಾಕ್ಟರ್, ಇಂಜಿನಿಯರ್ ಆಗಬೇಕೆಂಬುದು ಬಯಸುತ್ತಾರೆ. ಅದರ ಬದಲಾಗಿ ಹೊಸ ಕ್ಷೇತ್ರಗಳತ್ತ ತಮ್ಮ ಮಕ್ಕಳನ್ನು ಕಳುಹಿಸುವುದಕ್ಕೆ ಪ್ರಯತ್ನ ಮಾಡಬೇಕು. ಸಾಕಷ್ಟು ಹೊಸ ಕ್ಷೇತ್ರಗಳಿವೆ ಅವುಗಳ ಬಗ್ಗೆ ತಿಳಿದುಕೊಂಡು ಸಂಶೋಧನೆ ಮಾಡಬೇಕು ಎಂದರು. ಕಳೆದ ಕೆಲ ದಿನಗಳ ಹಿಂದೆಷ್ಟೆ ಮಕ್ಕಳು ಹೊಸ ಸಂಶೋಧನೆ ಮಾಡುವುದಕ್ಕೆ ಪೆÇ್ರೀತ್ಸಾಹ ಕೊಡಬೇಕೆಂಬುದು ಕೇಂದ್ರ ಶಿಕ್ಷಣ ಸಚಿವರ ಹೇಳಿದ್ದರು ಎಂದು ಇದೇ ವೇಳೆ ಸ್ಮರಿಸಿದರು. ಈ ವೇಳೆ ವಿವಿಧ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಪದವಿ ಪೂರ್ವಕಾಲೇಜಿನ ನಿರ್ದೇಶಕ ಡಾ.ಡಿ.ಎಸ್.ಜಯಂತ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಕೆ.ಶೇಖರಪ್ಪ, ಎ.ರಾಜೇಂದ್ರಕುಮಾರ್, ಜಿ.ಬಿ.ಚಂದ್ರಶೇಖರಪ್ಪ, ಪ್ರಸಾದ್ ಬಂಗೇರಾ, ಟಿ.ಎ.ಕರಿಯಪ್ಪ ಸೇರಿದಂತೆ ಮತ್ತಿತರರಿದ್ದರು.

Recent Articles

spot_img

Related Stories

Share via
Copy link
Powered by Social Snap