ಕುಮಾರಸ್ವಾಮಿ ಹೆಸರು ಹೇಳಿಕೊಂಡು ರೈಸ್ ಪುಲ್ಲಿಂಗ್ ದಂಧೆ

ಬೆಂಗಳೂರು:

     ಆನೇಕಲ್‍ನ ಸುತ್ತಮುತ್ತಲ ಹಳ್ಳಿಯಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಹೇಳಿಕೊಂಡು ರೈಸ್ ಪುಲ್ಲಿಂಗ್ ದಂಧೆ ನಡೆಸಿ ಕೋಟ್ಯಾಂತರ ರೂಗಳ ವಂಚನೆ ನಡೆಸಿದ್ದ ವ್ಯಕ್ತಿಯೊಬ್ಬ ಪೊಲೀಸರು ಬಂಧಿಸುವ ಮಾಹಿತಿ ತಿಳಿದ ಕೊಡಲೇ ವಿಷ ಕುಡಿದು ಆತ್ಮಹತ್ಯೆಯ ನಾಟಕ ಮಾಡಿದ್ದಾನೆ.

      ಆತ್ಮಹತ್ಯೆಗೆ ಯತ್ನಿಸಿದ ನೆಲಮಂಗಲದ ತಾವರೆಕೆರೆಯ ರಾಮಚಂದ್ರಾಚಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ. ರೈಸ್ ಪುಲ್ಲಿಂಗ್‍ಗೆ ಹಣ ಹೂಡಿದರೆ, ಒಂದಕ್ಕೆ ಹತ್ತರಷ್ಟು ಹೆಚ್ಚು ಹಣ ನೀಡುತ್ತೇನೆ ಎಂದು ಹೇಳಿ 250ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದಾನೆ.

         ನಿಧಿ ಸಿಕ್ಕಿರುವುದನ್ನು ಮಾರಾಟ ಮಾಡಿದ್ದರಿಂದ ಹೆಚ್ಚಿನ ಹಣ ಬಂದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನಗೆ 8,080 ಕೋಟಿ ರೂ. ನೀಡಬೇಕಿದೆ. ಅವರು ಜೊತೆ ಮಾಡಿಕೊಂಡ ಒಪ್ಪಂದ ಬಾಂಡ್ ಪೇಪರ್ ನನ್ನ ಬಳಿಗೆ ಇದೆ ಎನ್ನುತ್ತಾ ರಾಮಚಂದ್ರಚಾರಿ ಹೂಡಿದ ಹಣಕ್ಕೆ ಹತ್ತುಪಟ್ಟು ಹೆಚ್ಚು ಹಣ ನೀಡುತ್ತೇನೆ ಎಂದು ವಂಚನೆ ನಡೆಸುತ್ತಿದ್ದನು.

ಮೊಬೈಲ್‍ನಲ್ಲಿ ರೆಕಾರ್ಡ್:    ಹೂಡಿದ ಹಣಕ್ಕೆ ಹತ್ತುಪಟ್ಟು ಹಣ ಸಿಗುತ್ತದೆ ಎನ್ನವ ಆಸೆಗೆ ಬಿದ್ದ ಜನ ಆಭರಣ,ಸೈಟ್, ಆಸ್ತಿ ಮಾರಾಟ ಮಾಡಿ ಹಣ ನೀಡಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆ, ಲಿಖಿತ ಒಪ್ಪಂದ ಮಾಡಿಕೊಂಡಿರಲಿಲ್ಲ. ಕೆಲವರು ಮಾತ್ರ ರಾಮಚಂದ್ರಚಾರಿ ಜೊತೆಗಿನ ವ್ಯವಹಾರವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

      ಹಣ ನೀಡುವವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ತೆರೆಯಬೇಕು. ಇದರಿಂದ ನಾವು ಹಣ ಮರಳಿ ನೀಡಲು ಸಹಾಯವಾಗುತ್ತದೆ ಎಂದು ರಾಮಚಂದ್ರಚಾರಿ ಹೇಳಿದ್ದಾನೆ. ಈತನ ಮಾತನ್ನು ಕೇಳಿ 350ಕ್ಕೂ ಹೆಚ್ಚು ಜನರು ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ.

     ಇದಕ್ಕೂ ಮುನ್ನ ಹಿಂದೆ ರಾಮಚಂದ್ರಚಾರಿ ತಾವರೆಕೆರೆ ಸುತ್ತ ಮುತ್ತಲಿನ ಜನರಿಂದ ಹಣ ಪಡೆದಿದ್ದ.ಅಲ್ಲಿಂದ ಪರಾರಿಯಾಗಿ ಬಂದ ರಾಮಚಂದ್ರಚಾರಿ 20 ವರ್ಷಗಳಿಂದ ಆನೇಕಲ್‍ನ ಚೂಡೇನಹಳ್ಳಿಗೆ ವಾಸವಿದ್ದು, ಇಲ್ಲಿಯೂ ಸುಮ್ಮನಿರದ ರಾಮಚಂದ್ರಚಾರಿ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದ.

      ನಂಬಿಸುವುದರಲ್ಲಿ ಎತ್ತಿದ ಕೈ     ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಬಳಿಸಿಕೊಂಡು ದಂಧೆ ನಡೆಸಿಕೊಂಡು ಬಂದಿದ್ದ. ಅಷ್ಟೇ ಅಲ್ಲದೆ ನನ್ನ ಜೊತೆಗೆ ಪ್ರಮುಖ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಸಹ ಇದ್ದಾರೆ ಎಂದು ಸಾರ್ವಜನಿಕರಿಗೆ ನಂಬಿಸಿ ಬಲೆಗೆ ಬೀಳಿಸಿದ್ದ.

        ನಮ್ಮ ಹಣವನ್ನು ನಮಗೆ ವಾಪಾಸ್ ನೀಡಿ ಅಂತಾ ಅನೇಕರು ಕೇಳಿಕೊಂಡಿದ್ದರು. ಆದರೆ ನೋಟ್ ಬ್ಯಾನ್ ನೆಪ ಹೇಳಿ ರಾಮಚಂದ್ರಚಾರಿ ಕಾಲ ದೂಡುತ್ತಿದ್ದ. ಇತ್ತೀಚೆಗೆ ಹಣ ನೀಡಲೇ ಬೇಕು ಎಂದು ಜನ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವಿಚಲಿತಗೊಂಡ ರಾಮಚಂದ್ರಚಾರಿ ಬುಧವಾರ ನೀಡುತ್ತೇನೆ ಮನೆಗೆ ಬನ್ನಿ ಎಂದು ಎಲ್ಲರಿಗೂ ತಿಳಿಸಿದ್ದ. ಇತ್ತ ಹಣ ನೀಡಿದ್ದ ಜನರು ಬರುತ್ತಿದ್ದಾರೆಂದು ಅರಿತ ರಾಮಚಂದ್ರಚಾರಿ ವಿಷ ಸೇವಿಸುವ ನಾಟಕವಾಡಿ ಆಸ್ಪತ್ರೆ ಸೇರಿದ್ದಾನೆ.

         ಹಣ ವಂಚನೆ ಆರೋಪದಡಿ ರಾಮಚಂದ್ರಚಾರಿ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ