ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮ

ಹೊಸಕೋಟೆ:

     ನಗರದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ದೃಷ್ಠಿಯಿಂದ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಉಮಾಶಂಕರ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಸುಗುಣ ಫುಡ್ಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಬ್ಯಾರಿಕೇಡ್‌ಗಳನ್ನು ಸ್ವೀಕರಿಸಿ ಮಾತನಾಡಿದರು.

ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಹೊಸಕೋಟೆ ನಗರ ವಾಣಿಜ್ಯೇತರವಾಗಿ ಸಾಕಷ್ಟು ಅಭಿವೃದ್ದಿ ಹೊಂದುತ್ತಿದೆ. ಪ್ರಮುಖವಾಗಿ ಆಂದ್ರಪ್ರದೇಶದ ತಿರುಪತಿ, ಕಾಳಹಸ್ತಿ, ವಿಜಯವಾಡ, ಚೆನ್ನೆ ಸೇರಿದಂತೆ ಪ್ರಸಿದ್ದ ಸ್ಥಳಗಳಿಗೆ ತೆರಳಲು ಪ್ರತಿದಿನ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಪರಿಣಾಮ ವಾಹನ ದಟ್ಟಣೆ ನಿಯಂತ್ರಣ ಕಷ್ಟಕರವಾಗಿದೆ. ಆದರೂ ಅಗತ್ಯ ಸ್ಥಳದಲ್ಲಿ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಸಂಚಾರ ದಟ್ಟಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಅಡ್ಡಾದಿಡ್ಡಿ ಸವಾರಿ, ಅವೈಜ್ಞಾನಿಕ ಪಾರ್ಕಿಂಗ್ ಮಾಡುವ ಮೂಲಕ ಅನಗತ್ಯವಾಗಿ ವಾಹನ ದಟ್ಟಣೆ ಉಂಟುಮಾಡುವ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap