ಕೂಡ್ಲಿಗಿ: ತಾಲ್ಲೂಕಿನ ಕಡೇಕೊಳ್ಳ ಗ್ರಾಮದಲ್ಲಿ ಮಂಗಳವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಕರಡಿಯೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿವೆ. ಮಲ್ಲಮ್ಮ ಗಾಯಗೊಂಡ ಮಹಿಳೆ.
ಮಲ್ಲಮ್ಮ ಎಂದಿನಂತೆ ತನ್ನ ಎಲೆ ತೋಟದಲ್ಲಿ ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ,ಅಲ್ಲೆ ತನ್ನ ಎರಡು ಮರಿಗಳೊಂದಿಗೆ ಅಡಗಿದ್ದ ಕರಡಿ ಏಕಾ ಏಕಿ ಮಲ್ಲಮ್ಮನ ಮೇಲೇ ದಾಳಿ ಮಾಡಿ, ತಲೆಯ ಭಾಗ, ಕಣ್ಣು ಸೇರಿದಂತೆ ಮುಖದ ಬಹುಭಾಗವನ್ನು ಕಿತ್ತು ಹಾಕಿದೆ. ಇದನ್ನು ನೋಡಿದ ಪಕ್ಕದ ತೋಟದಲ್ಲಿದ್ದ ವೀರೇಶಯ್ಯ ತಕ್ಷಣ ಗಾಯಾಳು ಮಹಿಳೆಯನ್ನು ಎತ್ತಿಕೊಂಡು ರಸ್ತೆಗೆ ಬಂದಿದ್ದಾರೆ. ನಂತರ ಮಲ್ಲಮ್ಮನ ಮಗ ರುದ್ರಪ್ಪ ಹಾಗೂ ವೀರೇಶಯ್ಯ ಅವರು ಸಮೀಪದ ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‍ಗೆ ಕರೆದುಕೊಂಡು ಹೋಗಲಾಗಿದೆ.
ಕರಡಿ ದಾಲಿ ಮಾಡಿದ ವಿಷಯ ತಿಳಿದ ನಾವು ಸ್ಥಳಕ್ಕೆ ಹೋಗಿ ಕರಡಿ ಹಿಡಿಯಲು ಕಾರ್ಯಚರಣೆ ಮಾಡಿದ್ದೆವು. ಆದರೆ ಒಂದು ಮರಿಯೊಂದಿಗೆ ಕರಡಿ ಅರಣ್ಯಕ್ಕೆ ಓಡಿ ಹೋಗಿದ್ದು, ಇನ್ನೊಂದು ಮರಿಯನ್ನು ಹಿಡಿಯಲಾಗಿದೆ. ಅದನ್ನು ನಾಳೆ ಬಳ್ಳಾರಿ ಪ್ರಾಣಿ ಸಂಗ್ರಹಲಾಯಕ್ಕೆ ಬಿಡಲಾಗುವುದು ಎಂದು ಗುಡೇಕೋಟೆ ವಲಯ ಆರಣ್ಯಧಿಕಾರಿ ಬಿ.ಎಸ್. ಮಂಜುನಾಥ ತಿಳಿಸಿದ್ದು, ಗಾಯಗೊಂಡ ಮಹಿಳೆಯ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ತಿಳಿಸಿದರು.






