ಕೃಷ್ಣ ಜನ್ಮಾಷ್ಟಮಿ ಆಚರಣೆ

ಕೂಡ್ಲಿಗಿ:

      ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಯಾದವ ಸಂಘದಿಂದ ಶ್ರೀ ಕೃಷ್ಣನ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮಾಷ್ಟಮಿಯನ್ನು ಭಾನುವಾರ ಸರಳವಾಗಿ ಆಚರಣೆ ಮಾಡಲಾಯಿತು.

      ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ಮಾತನಾಡಿ, ಧರ್ಮ ಸಂಸ್ಥಾಪಣೆಗಾಗಿ ಜನ್ಮತಾಳಿದ ಶ್ರೀ ಕೃಷ್ಣನ ಭಗದ್ಗೀತೆಯ ಮೂಲಕ ಆಧ್ಯಾತ್ಮೀಕ ನೆಲೆಯಲ್ಲಿ ರಾಜನೀತಿ, ಸಮಾಜ ನೀತಿಯನ್ನು ಜಗತ್ತಿಗೆ ಸಾರಿದ್ದು, ಅದರಲ್ಲಿನ ಆಚಾರ,ವಿಚಾರಗಳನ್ನು ಇಡಿ ವಿಶ್ವವೇ ಆರಾಧಿಸುತ್ತದೆ. ಜನ್ಮಾಷ್ಟಮಿಯ ಮೂಲಕ ಯಾದವ ಜನಾಂಗ ಒಂದು ಕಡೆ ಸೇರಲು ಅನುಕೂಲವಾಗಿದೆ ಎಂದರು.

      ಯಾದವ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ. ಗುರುಲಿಂಗಪ್ಪ ಮಾತನಾಡಿ, ‘ಇಂದು ತಾಲ್ಲೂಕು ಆಡಳಿತದಿಂದ ಶ್ರೀ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಿದ್ದು, ಈ ತಿಂಗಳ ಮಧ್ಯದಲ್ಲಿ ತಾಲ್ಲೂಕು ಯಾದವ ಸಂಘದಿಂದ ಅದ್ದೂರಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುವುದು. ಇದರಲ್ಲಿ ತಾಲ್ಲೂಕಿನ ಎಲ್ಲಾ ಯಾದವರನ್ನು ಸೇರಿಸಲಾಗುವುದು’ ಎಂದರು.

      ಪ್ರಭಾರ ತಹಶೀಲ್ದಾರ್ ಮಂಜುನಾಥ ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯ ಸಣ್ಣಪ್ಪ, ಬಿಸಿಎಂ ಅಧಿಕಾರಿ ಪಂಪಾಪತಿ, ಕೆಇಆರ್‍ಡಿಎಲ್ ಸಹಾಯಕ ಕಾರ್ಯನಿರ್ವಹಕ ಎಂಜನಿಯರ್ ರಮೇಶ, ಉಪನ್ಯಾಸಕಿ ಡಾ. ಟಿ. ಗಾಯಿತ್ರಿದೇವಿ, ಸಂಘದ ಉಪಾಧ್ಯಕ್ಷ ಜಿ. ಸೀತಾರಾಮ, ಕಾರ್ಯದರ್ಶಿ ಡಿ.ಬಿ. ಚಿತ್ತಪ್ಪ, ಖಜಾಂಚಿ ರಾಜಶೇಖರ, ಮುಖಂಡರಾದ ಬಾಲಪ್ಪ, ಸಣ್ಣ ದೊಡ್ಡಪ್ಪ, ಬುಗಡಿ ಬಾಲಪ್ಪ, ಕೃಷ್ಣಪ್ಪ, ನಾಗಪ್ಪ, ಶಿವಮೂರ್ತಿ, ಚಿನ್ನಪ್ಪ, ಓಬಳೇಶ್, ಸಿದ್ದಪ್ಪ, ಜೋಗಿ ಕರಿಯಪ್ಪ, ಸಿದ್ದೇಶ, ಮೂಡ್ಲಪ್ಪ, ಸಂಡೂರಪ್ಪ, ಶ್ರೀನಿವಾಸ, ಲಕ್ಷ್ಮಣ, ಕುಶ, ದೊಡ್ಡಯ್ಯ, ಗೌಡ ಚಿತ್ತಪ್ಪ, ಗಂಗಾಧರ, ತಮ್ಮಪ್ಪ, ಸಿದ್ದನಗೌಡ, ಸಿದ್ದಪ್ಪ ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link