ಹಾನಗಲ್ಲ :
ತಾಲೂಕಿನ ನರೇಗಲ್ಲ ಕೆರೆಯಲ್ಲಿ ದನಕ್ಕೆ ನೀರು ಕುಡಿಸಲು ತೆರಳಿದ ಆಯತಪ್ಪಿ ನೀರಿನಲ್ಲಿ ಕೊಚ್ಚಿಹೋದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಅರುಣ ಶಿವಬಸಪ್ಪ ಹೊನ್ನಳ್ಳಿ(23) ಮೃತಪಟ್ಟ ಯುವಕ. ನರೇಗಲ್ ಕೆರೆ 300 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ತಾಲೂಕಿನ ದೊಡ್ಡ ಕೆರೆಯಾಗಿದ್ದು, ಮೃತ ಯುವಕನ ಶವ ಇದುವರೆಗೂ ದೊರೆತಿಲ್ಲ. ತೆಪ್ಪಗಳಲ್ಲಿ ಮುಳುಗು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದಾರೆ. ಗ್ರಾಮದ ಜನರು ಕೆರೆಯ ಆವರಣದಲ್ಲಿ ಜಮಾಯಿಸಿದ್ದು, ಆತಂಕದ ಸ್ಥಿತಿ ಕಂಡು ಬರುತ್ತಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ