ತಿರುವನಂತಪುರಂ:
ಕೇರಳ ಎಂದರೆ ಈಗ ನೆನಪಿಗೆ ಬರುವುದು ನೆರೆ ಪಿಡಿತ ಪ್ರದೇಶ ಎಂಬುದು ಮಾತ್ರ ಆದರೆ ಇಲ್ಲೊಬ್ಬರು ಕೇರಳದ ಶಾಸಕ ಪಿಕೆ ಶಶಿ ಎಂಬುವವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.ಸ್ವ ಪಕ್ಷದ ಯೂಥ್ ವಿಂಗ್ ನ ಮಹಿಳಾ ಸದಸ್ಯೆಯೊಬ್ಬರು ಆರೋಪಿಸಿ , ಪಕ್ಷದ ಹಿರಿಯ ಮುಖಂಡರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ಕುರಿತಂತೆ ತನಿಖೆ ಆರಂಭವಾಗಿದೆ ಎಂದು ಸಿಪಿಐಎಂ ಹೇಳಿದೆ. ಡೆಮಾಕ್ರಾಟಿಕ್ ಯೂಥ್ ಫೆಡೆರೇಷನ್ ಆಫ್ ಇಂಡಿಯಾ (ಡಿಎಫ್ ವೈಐ)ನ ಮಹಿಳಾ ಸದಸ್ಯೆಯೊಬ್ಬರು, ತಮಗಾದ ನೋವನ್ನು ಪತ್ರದ ಮೂಲಕ ಅರಿಕೆ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಗೆ ಪತ್ರ ತಲುಪಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಕಂಗಾಲಾದ ಅವರು ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಹಾಗೂ ಸೀತಾರಾಮ್ ಯೆಚೂರಿಗೂ ಪತ್ರ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
