ಕೊಡಗಿಗೆ 25 ಲಕ್ಷ ರೂ.ಪರಿಹಾರ ಸಾಮಗ್ರಿ 3 ಲಾರಿಗಳಲ್ಲಿ ರವಾನೆ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ

            ನೆರೆಯಿಂದ ಬಾಧಿತರಾದ ಕೊಡಗು ಮತ್ತು ಕೇರಳ ರಾಜ್ಯದ ಜನರ ನೋವಿಗೆ ಬಳ್ಳಾರಿ ಜಿಲ್ಲೆ ಮಿಡಿದಿದ್ದು, ಜಿಲ್ಲಾಡಳಿತವು ಜಿಲ್ಲೆಯ ಸಾರ್ವಜನಿಕರು,ರೆಡ್‍ಕ್ರಾಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನೀಡಿದ ಆಹಾರ ಸಾಮಗ್ರಿ,ಬಟ್ಟೆ ಸೇರಿದಂತೆ 25 ಲಕ್ಷ ರೂ.ಮೊತ್ತದ ವಿವಿಧ ರೀತಿಯ ಪರಿಹಾರ ಸಾಮಗ್ರಿಗಳನ್ನು 3 ಲಾರಿಗಳಲ್ಲಿ ಭರ್ತಿ(ಲೋಡ್) ಮಾಡಿ ಶನಿವಾರ ಬಳ್ಳಾರಿಯಿಂದ ಕಳುಹಿಸಿಕೊಡಲಾಯಿತು.
            ಅದರಲ್ಲಿ ಎರಡು ಲಾರಿ ಪರಿಹಾರ ಸಾಮಗ್ರಿಗಳು ಕೊಡಗಿಗೆ ಮತ್ತು ಒಂದು ಲಾರಿ ಪರಿಹಾರ ಸಾಮಗ್ರಿಗಳು ಕೇರಳದ ಪಲ್ಲಕಾಡ್‍ಗೆ ಕಳುಹಿಸಿಕೊಡಲಾಯಿತು. ಜಿಲ್ಲಾಧಿಕಾರಿಗಳು ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಇದಕ್ಕೆ ಹಸಿರು ನಿಶಾನೆ ತೋರಿದರು.
            ಈ ಸಾಮಾಗ್ರಿಗಳ ಜೊತೆ ರೂ.17,73,300 ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮತ್ತು ರೂ.6,35,116ಗಳನ್ನು ಕೇರಳ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ಕು ರೂಪದಲ್ಲಿ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ಆಹಾರ ಸಂಬಂಧಿತ ಸಾಮಗ್ರಿಗಳು,ಬಟ್ಟೆಗಳು ಮತ್ತು ಅಗತ್ಯ ವಸ್ತುಗಳು ನಾವು ಕಳುಹಿಸಿಕೊಡಲಾಗುತ್ತಿರುವ ಪರಿಹಾರ ಸಾಮಗ್ರಿಗಳಲ್ಲಿವೆ. ಕೊಡಗು ಜಿಲ್ಲಾಧಿಕಾರಿಗಳು ನಮ್ಮಲ್ಲಿ ಸಂಗ್ರಹಕ್ಕೆ ಸೂಕ್ತ ಗೋದಾಮುಗಳಿಲ್ಲದ ಕಾರಣ ಅವುಗಳನ್ನು ತಮ್ಮಲ್ಲಿಯೇ ಸಂಗ್ರಹಿಸಿಡಿ; ನಮಗೆ ಅವಶ್ಯಕತೆ ಎನಿಸಿದಾಗ ಕೇಳುತ್ತೇವೆ ಕಳುಹಿಸಿಕೊಡಿ ಅಂತ ಹೇಳಿದ ಕಾರಣ ಬಳ್ಳಾರಿಯಲ್ಲಿಯೇ ಸಂಗ್ರಹಿಸಿಡಲಾಗಿತ್ತು. ಶುಕ್ರವಾರ ಸಂಜೆ ಪೋನ್ ಮಾಡಿ ಕಳುಹಿಸಿಕೊಡಿ ಅಂತ ಹೇಳಿರುವುದರಿಂದ ಇಂದು ಪರಿಹಾರ ಸಾಮಗ್ರಿಗಳು ಮತ್ತು ಪರಿಹಾರ ನಿಧಿಯ ಚೆಕ್‍ಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.
                ಬಳ್ಳಾರಿ ನಗರದ ಚೈತನ್ಯ ಟೆಕ್ನೋ ಶಾಲೆಯ ಸುಮಾರು 1000 ವಿದ್ಯಾರ್ಥಿಗಳು ಉದಾರವಾಗಿ ದೇಣಿಗೆ ನೀಡಿದ್ದ (ಅಂದಾಜು 3ಲಕ್ಷ ರೂ.ಮೌಲ್ಯದ) ಪರಿಹಾರ ಸಾಮಾಗ್ರಿಗಳನ್ನು ಸಹ ಈ ಲಾರಿಗಳ ಮೂಲಕ ನೆರೆ ಸಂತ್ರಸ್ತರಿಗೆ ತಲುಪಿಸುವ ಸಲುವಾಗಿ ಕಳುಹಿಸಿಕೊಡಲಾಯಿತು.
                 ಈ ಪರಿಹಾರ ಸಾಮಗ್ರಿಗಳು ಹೊತ್ತ ಲಾರಿಗಳೊಂದಿಗೆ ಭಾರತೀಯ ರೆಡ್‍ಕ್ರಾಸ್ ಕಾರ್ಯದರ್ಶಿ ಎಂ.ಎ.ಷಕೀಬ್ ತೆರಳಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಚೈತನ್ಯ ಟೆಕ್ನೋ ಶಾಲೆ ಪ್ರಾಂಶುಪಾಲ ಅನೀಸ್ ಅಗಸ್ಟೀನ್ ಹಾಗೂ ಶಾಲೆಯ ಸಿಬ್ಬಂದಿ ಇದ್ದರು.

Recent Articles

spot_img

Related Stories

Share via
Copy link