ಕೊಡಗು ಸಂತ್ರಸ್ತರಿಗೆ ರೋಟರಿ ಕ್ಲಬ್‍ನಿಂದ 50ಸಾವಿರ ರೂ ಧನ ಸಹಾಯ

ತಿಪಟೂರು 

               ಮಹಾಮಳೆಯಿಂದ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತ ಕುಟುಂಬಗಳಿಗೆ ತಿಪಟೂರು ರೋಟರಿ ಕ್ಲಬ್ ವತಿಯಿಂದ 50ಸಾವಿರ ರೂಗಳನ್ನು ಕೊಡಗು ಐ.ಎಂ.ಎ ಶಾಖೆಯ ಖಾತೆಗೆ ಸಲ್ಲಿಸುವ ಮೂಲಕ ಸಹಾಯ ಹಸ್ತ ನೀಡಿದೆ.
ಇಲ್ಲಿನ ಮರ್ಚೆಂಟ್ ಕೋ ಅಪರೇಟಿವ್ ಬ್ಯಾಂಕ್ ವತಿಯಿಂದ 10ಸಾವಿರ ರೂ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನಿಂದ ಸ್ಪೆಟರ್, ಬ್ಲಾಂಕೆಟ್ಸ್, ವಾಟರ್ ಬಾಟಲ್, ಬಟ್ಟೆಗಳನ್ನು ನೀಡಲಾಗಿದ್ದು, ಈ ಎಲ್ಲಾ ವಸ್ತುಗಳನ್ನು ಆಂಬ್ಯೂಲೆನ್ಸ್ ಮೂಲಕ ತೆಗದುಕೊಂಡು ಹೋಗಲಾಯಿತು.

               ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಕೊಡಗು ಜನರ ಪರಿಸ್ಥಿತಿಯನ್ನು ನೋಡಿದರೆ ಎಂಥಹವರಿಗೂ ತುಂಬಾ ನೋವಾಗುತ್ತದೆ. ಮನೆ, ಜಮೀನು, ಕುಟುಂಬಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಇಲ್ಲಿನ ಜನರಿಗೆ ಸಹಾಯ ಮಾಡುವ ಮೂಲಕ ರಾಜ್ಯದ ಜನತೆ ಮಾನವೀಯತೆ ಮೆರೆದಿದ್ದಾರೆ. ಅದರಂತೆ ನಾವು ಸಹ ನಮ್ಮ ಕೈಲಾದ ಸೇವೆ ಮಾಡಿದ್ದೇವೆಂದು ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ತೋಂಟದಾರ್ಯ, ಖಜಾಂಚಿ ಅಶೋಕ್, ನಿರ್ದೇಶಕರುಗಳಾದ ಸಚಿನ್, ಸಂತೋಷ್ ಓಸ್‍ವಾಲ್, ವಿಜಯಕುಮಾರ್, ಅರುಣ್‍ಕುಮಾರ್, ಡಾ. ರಮೇಶ್‍ಬಾಬು, ಪ್ರಕಾಶ್, ವೇದ ಶಂಕರ್ ಮತ್ತಿತರರಿದ್ದರು.

Recent Articles

spot_img

Related Stories

Share via
Copy link