ಬೆಂಗಳೂರು:
ಮಹಾಮಳೆಯ ಆರ್ಭಟಕ್ಕೆ ನಲುಗಿರುವ ಕೊಡಗು ಸಂತ್ರಸ್ತರಿಗೆ ಬೆಂಗಳೂರು ಮಹಾನಗರ ಪಾಲಿಕೆಯು 2.18 ಕೋಟಿ ರೂ.ಗಳ ನೆರವನ್ನು ನೀಡಲಿದೆ
ಮಳೆಯಿಂದಾಗಿ ಆವರಿಸಿಕೊಂಡಿರುವ ಅನೈರ್ಮಲ್ಯದ ಸ್ವಚ್ಚತೆಗಾಗಿ 300 ಪೌರ ಕಾರ್ಮಿಕರನ್ನು ಕಳುಹಿಸಲಾಗುವುದು.ಅಲ್ಲದೆ, ಶೌಚಾಲಯಕ್ಕಾಗಿ 100 ಇ ಟಾಯ್ಲೆಟನ್ನು ಕೂಡಾ ಕಳುಹಿಸಲಾಗುವುದು. ಬಿಡಬ್ಲ್ಯು ಎಸ್‍ಎಸ್‍ಬಿಯಿಂದ ಸ್ವಚ್ಚತೆ ಸಿಬ್ಬಂದಿ ಮತ್ತು ಯಂತ್ರಗಳನ್ನು ರವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ; ಮಹಾಮಳೆಯ ಆರ್ಭಟಕ್ಕೆ ತುತ್ತಾಗಿರುವ ಕೊಡಗು ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಪೊಲೀಸ್ ಇಲಾಖೆಯು ನೆರವನ್ನು ನೀಡಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಡಿ.ಜಿ.ನೀಲಮಣಿ ರಾಜು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪೊಲೀಸರು ತಮ್ಮ ಒಂದು ದಿನದ ವೇತನವನ್ನು ನೀಡಲು ಮುಂದಾಗಿದೆ.ಸುಮಾರು 96 ಸಾವಿರ ಮಂದಿ ಪೊಲೀಸರು ತಮ್ಮ ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದ್ದಾರೆ.