ರಾಜ್ಯದಲ್ಲಿ ಮಹಿಳಾ ಬ್ಯಾಂಕ್ ಹೆಚ್ಚಿಸಿ: ಎಚ್ ಕೆ ಪಾಟೀಲ್

ಬೆಂಗಳೂರು

       ರಾಜ್ಯದಲ್ಲಿ ಬೆರಳೆಣಕೆಯಷ್ಟಿರುವ ಮಹಿಳಾ ಬ್ಯಾಂಕ್‍ಗಳ ಸಂಖ್ಯೆಯನ್ನು ಹೆಚ್ಚಿಸಿ ಮಹಿಳೆಯರ ಸ್ವಾವಲಂಬನೆಯಿಂದ ಬದುಕುವಂತೆ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

     ರಾಜ್ಯದಲ್ಲಿ 264 ಸಹಕಾರಿ ಬ್ಯಾಂಕ್‍ಗಳಿದ್ದು, 400 ಕೋಟಿಗೂ ಹೆಚ್ಚು ಲಾಭಗಳಿಸುತ್ತಿವೆ ಐದು ಲಕ್ಷ ಕೋಟಿ ಬಂಡವಾಳದಲ್ಲಿ ಸಹಕಾರಿ ಬ್ಯಾಂಕ್‍ಗಳೂ ಹೆಜ್ಜೆ ಹಾಕಲಾಗುತ್ತಿವೆ. ಇದು ಅತ್ಯದ್ಬುತ ಬೆಳವಣಿಗೆಯಾಗಿದೆ.ಮಹಿಳಾ ಸಹಕಾರಿ ಬ್ಯಾಂಕ್‍ಗಳು ಲಾಭದ ಜೊತೆಗೆ ಮಹಿಳಾ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

      ನಗರದ ಪುರಭವನದಲ್ಲಿ ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ, ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ

      ಪ್ರತಿ ವರ್ಷ 250ಕ್ಕೂ ಮಹಿಳಾ ಉದ್ಯೋಗ ಸೃಷ್ಟಿಯಾದರೆ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಾರೆ, ಇತ್ತೀಚೆಗೆ ಬ್ಯಾಂಕ್‍ಗಳ ನಿಬಂಧನೆಗಳನ್ನು ಸರಳಿಕರಣಗೊಳಿಸಲಾಗಿದ್ದು, ಉನ್ನತಿಯತ್ತ ಮಹಿಳಾ ಬ್ಯಾಂಕ್ ಹೆಜ್ಜೆ ಇಡಬೇಕಿದೆ ಎಂದರು.

     ಸಹಕಾರಿ ಬ್ಯಾಂಕ್ ಕ್ಷೇತ್ರಕ್ಕೆ ಸರ್ಕಾರದ ಸಹಾಯ, ಸಹಕಾರ ವಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಸಹಕಾರಿ ಕ್ಷೇತ್ರ ಬೆಳೆಯಬಾರದು ಎಂಬ ಉದ್ದೇಶದಿಂದ ಅನುಮತಿಯನ್ನೂ ನೀಡಲಿಲ್ಲ. ಸಹಕಾರಿ ಕ್ಷೇತ್ರದ ಎಲ್ಲ ಬೆಳವಣಿಗೆ ಗಳಿಗೂ ಆರ್‍ಬಿಐ ಆಧುನಿಕ ತಂತ್ರಜ್ಞಾನ ಅಳವಡಿಕೆ ನೆಪದಲ್ಲಿ ಅಡೆತಡೆ ತರುತ್ತಿದ್ದಾರೆ.ಆದರೆ, ಸಹಕಾರಿ ಬ್ಯಾಂಕ್‍ಗಳ ಬೆಳವಣಿಗೆಗೆ ಅರ್‍ಬಿಐ ಉತ್ತಮ ಅವಕಾಶಗಳನ್ನು ಕಲ್ಪಿಸಿ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್, ಪಟ್ಟಣ ಸಹಕಾರಿ ಸಂಘದ ಸದಸ್ಯ ಕೃಷ್ಣಾ, ಬ್ಯಾಂಕ್ ಅಧ್ಯಕ್ಷೆ ವಿ. ಕಮಲಾ ನಟರಾಜನ್, ಸಂಸ್ಥಾಪಕ ಅಧ್ಯಕ್ಷೆ ಡಾ. ವಾಸವಿ ರಂಗಮಾಧಾಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link